ಕೊನೆಗೂ ಸಚಿನ್ ತೆಂಡೂಲ್ಕರ್ ಲಾರ್ಡ್ಸ್ ಗಂಟೆ ಬಾರಿಸಲೇ ಇಲ್ಲ, ಯಾಕೆ ಗೊತ್ತ!

ಲಂಡನ್: ಇಂಗ್ಲೆಂಡ್ ಮತ್ತು ಟೀಂ ಇಂಡಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮಳೆಯಿಂದಾಗಿ ರದ್ದಾಗಿದೆ.
ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು ಇಲ್ಲಿ ದಿನದ ಪಂದ್ಯದ ಆರಂಭವನ್ನು ಗಂಟೆ ಬಾರಿಸುವ ಮೂಲಕ ಸಾರುವ ಸಂಪ್ರದಾಯವಿದೆ.
ಟೀಂ ಇಂಡಿಯಾ-ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಈ ಗೌರವ ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಗೆ ಲಭಿಸಿತ್ತು. ಆದರೆ ಮಳೆಯಿಂದಾಗಿ ಆಟ ಆರಂಭವಾಗದೇ ಇದ್ದುದ್ದರಿಂದ ಸದ್ಯ ಸಚಿನ್ ಗೆ ಈ ಅವಕಾಶ ತಪ್ಪಿದೆ.
ಟೆಸ್ಟ್ ಪಂದ್ಯದ ಐದೂ ದಿನಗಳ ಕಾಲ ಖ್ಯಾತ ಮಾಜಿ ಕ್ರಿಕೆಟಿಗರಿಗೆ ಈ ಅವಕಾಶ ಸಿಗುತ್ತದೆ. ಸದ್ಯ ಈ ಅವಕಾಶ ಸಿಕ್ಕದಿದ್ದರು ಐದನೇ ದಿನದಾಟದಂದು ಗಂಟೆ ಬಾರಿಸಲು ಯಾವ ಆಟಗಾರನು ಆಯ್ಕೆಯಾಗದೆ ಇರುವುದು ಸಚಿನ್ ಅವರಿಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ