2019ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಆಡುವ ಚಾನ್ಸ್ ಕಳೆದುಕೊಂಡ 7 ಸ್ಟಾರ್ ಕ್ರಿಕೆಟಿಗರು, ಯಾಕೆ ಅಂತೀರಾ!

2019ರ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ ನಡೆಯಲಿದ್ದು ಅದಾಗಲೇ ತಂಡಗಳು ಕಸರತ್ತು ನಡೆಸಿವೆ. ಈ ಮಧ್ಯೆ ಕೆಲ ಸ್ಟಾರ್ ಆಟಗಾರರು ವಿಶ್ವಕಪ್ ಪಂದ್ಯಾವಳಿಯಿಂದ ದೂರ ಉಳಿದಿದ್ದಾರೆ.
ಯುವರಾಜ್ ಸಿಂಗ್
2011ರ ವಿಶ್ವಕಪ್ ವಿಜೇತ ಟೀಂ ಇಂಡಿಯಾದಲ್ಲಿ ಆಡಿದ್ದ ಯುವರಾಜ್ ಸಿಂಗ್ 2019ರ ವಿಶ್ವಕಪ್ ನಿಂದ ದೂರ ಉಳಿಯಲಿದ್ದಾರೆ. ಕಳಪೆ ಪ್ರದರ್ಶನ ನೀಡುತ್ತಿದ್ದರಿಂದ ಟೀಂ ಇಂಡಿಯಾ ತಂಡದಲ್ಲಿ ಸ್ಥಾನಪಡೆಯಲು ಯುವಿ ವಿಫಲರಾಗಿದ್ದಾರೆ.
ಬ್ರೆಂಡನ್ ಮೆಕಲಮ್
ನ್ಯೂಜಿಲೆಂಡ್ ತಂಡದ ಆಟಗಾರ ಬ್ರೆಂಡನ್ ಮೆಕಲಮ್ ಅವರು 2015ರ ವಿಶ್ವಕಪ್ ಪಂದ್ಯಾವಳಿಯ ಬಳಿಕ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು.
ಶೇನ್ ವಾಟ್ಸನ್
ಆಸ್ಟ್ರೇಲಿಯಾದ ಆಲ್ ರೌಂಡರ್ ಶೇನ್ ವಾಟ್ಸನ್ 2016ರಲ್ಲಿ ದಿಢೀರ್ ಅಂತಾ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದರು. ವಾಟ್ಸನ್ 2015ರ ವಿಶ್ವಕಪ್ ವಿಜೇತ ತಂಡದಲ್ಲಿ ಆಡಿದ್ದರು.
ಎಬಿಡಿ ವಿಲಿಯರ್ಸ್ 
ದಕ್ಷಿಣ ಆಫ್ರಿಕಾ ತಂಡ ಇಲ್ಲಿಯವರೆಗೂ ಒಂದು ಬಾರಿಯು ವಿಶ್ವಕಪ್ ಟ್ರೋಫಿಯನ್ನು ಗೆದ್ದಿಲ್ಲ. ಆದರೆ ಕಳೆದ ಬಾರಿ ಎಬಿಡಿ ವಿಲಿಯರ್ಸ್ ನಾಯಕತ್ವದಲ್ಲಿ ತಂಡ ವಿಶ್ವಕಪ್ ಗೆಲ್ಲುತ್ತದೆ ಎಂಬ ಆಶಾಭಾವವಿತ್ತು ಆದರೆ ತಂಡ ಈ ಬಾರಿಯು ನಿರಾಸೆ ಮೂಡಿಸಿತ್ತು. ಹೀಗಾಗಿ ಎಬಿಡಿ ವಿಲಿಯರ್ಸ್ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ.
ಇನ್ನು ಪಾಕಿಸ್ತಾನದ ಯೂನಿಸ್ ಖಾನ್, ಶ್ರೀಲಂಕಾದ ವೇಗಿ ಲಸಿತ್ ಮಲಿಂಗ ಮತ್ತು ಜಿಂಬಾಬ್ವೆಯ ಬ್ರೆಂಡನ್ ಟೇಲರ್ ತಮ್ಮ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದು 2019ರ ವಿಶ್ವಕಪ್ ಪಂದ್ಯಾವಳಿಯಿಂದ ದೂರ ಉಳಿದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ