ಬೆಂಗಳೂರು, ಆ.10- ಹಗುರ ಯುದ್ಧ ವಿಮಾನ (ಎಲ್ಸಿಎ) ತೇಜಸ್ ಭಾರತೀಯ ವಾಯು ಪಡೆ (ಐಎಎಫ್)ಯ ಬೆನ್ನೆಲುಬು ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ.ಸುವರ್ಣ ರಾಜು ಹೇಳಿದ್ದಾರೆ.
ದೇಶೀಯವಾಗಿ ಅಭಿವೃದ್ದಿಗೊಳಿಸಲಾದ ಸೂಪರ್ಸಾನಿಕ್ ಫೈಟರ್ ಜೆಟ್ ಲೇಸರ್ ಮಾರ್ಗದರ್ಶಿ ಬಾಂಬ್ಗಳನ್ನು ನಿಖರವಾಗಿ ಉಡಾಯಿಸಿ ವೈರಿಗಳ ನೆಲೆಗಳನ್ನು ನುಚ್ಚುನೂರು ಮಾಡುವ ಸಾಮಥ್ರ್ಯ ಹೊಂದಿದ್ದು, ಮುಂದಿನ ವರ್ಷಗಳಲ್ಲಿ ಇದು ಐಎಎಫ್ನ ಸದೃಢ ಬೆನ್ನೆಲುಬಾಗಿ ರೂಪುಗೊಳ್ಳಲಿದೆ ಎಂದು ಅವರು ತಿಳಿಸಿದರು.
ಉದ್ಯಾನನಗರಿಯ ಎಚ್ಎಎಲ್ ಏರ್ಪೆÇೀರ್ಟ್ನಿಂದ ಮುಖ್ಯ ಪರೀಕ್ಷಾ ಫೈಲೆಟ್ ಸಮೂಹ ಕ್ಯಾಪ್ಟನ್ ಕೆ.ಕೆ.ವೇಣುಗೋಪಾಲ್ ಅವರೊಂದಿಗೆ ಎರಡು ಆಸನಗಳ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ನಂತರ ಎಚ್ಎಎಲ್ ಮುಖ್ಯಸ್ಥರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಇದೊಂದು ಅದ್ಭುತ ಹಾರುವ ಯಂತ್ರ. ರೋಚಕ ಕುಶಲ ವೈಮಾನಿಕ ಚಾಲನೆಯಲ್ಲಿ ತೇಜಸ್ 30,000 ಅಡಿಗಳ ಎತ್ತರದಲ್ಲಿ ಹಾರಾಡಿದೆ ಹಾಗೂ 1.1 ಮ್ಯಾಕ್ ಸೂಪರ್ಸಾನಿಕ್ ವೇಗೋತ್ಕರ್ಷದಲ್ಲಿ ಮುನ್ನುಗ್ಗಿದೆ. ಇದು ಮುಂಬರುವ ವರ್ಷಗಳಲ್ಲಿ ಐಎಎಫ್ನ ಬ್ಯಾಕ್ಬೋನ್ ಆಗಲಿದೆ ಎಂದು ರಾಜು ಹೇಳಿದರು.
ತೇಜಸ್ ಫೈಟರ್ ಜೆಟ್ನನ್ನು ಈಗಾಗಲೇ ಐಎಎಫ್ಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ತಮಿಳುನಾಡಿನ ಕೊಯಮತ್ತೂರಿನ ಕಂಗಯಂಪಾಳ್ಯಂನ ಸೂಲೂರು ವಾಯು ನೆಲೆಯಲ್ಲಿರುವ ನಂ.45 ಸ್ಕ್ವಾರ್ಡನ್ ದಿ ಫ್ಲೈಯಿಂಗ್ ಡ್ಯಾಗರ್ಸ್ ದಳದಲ್ಲಿ ಸೇವೆಗೆ ನಿಯೋಜನೆಗೊಂಡಿದೆ.