ಬೆಂಗಳೂರು, ಆ.9-ಒಡಿಸ್ಸಿ ನೃತ್ಯ ಹಬ್ಬ ನಮನ 9ನೇ ಆವೃತ್ತಿಯಾಗಿ ಹಿಂತಿರುಗಿ ಬರುತ್ತಿದೆ. ನಗರದ ಒಡಿಸ್ಸಿ ಸಂಸ್ಥೆ ನೃತ್ಯಾಂತರ ತನ್ನ 9ನೇ ಒಡಿಸ್ಸಿ ನೃತ್ಯ ಹಬ್ಬ ನಮನ-2018 ಅನ್ನು ಆಗಸ್ಟ್ 12 ರಂದು ಜೆ.ಸಿ.ರಸ್ತೆಯಲ್ಲಿರುವ ಎಡಿಎ ರಂಗಮಂದಿರದಲ್ಲಿ ಹಮ್ಮಿಕೊಂಡಿದೆ.
ಅಂದು ಸಂಜೆ 5.30 ಗಂಟೆಗೆ ಬಿಜನ್ ಕುಮಾರ್ ಪಾಲೈ ಅವರ ನೃತ್ಯದೊಂದಿಗೆ ಪ್ರಾರಂಭವಾಗಿ ಶಾಶ್ವತಿ ಗರತ್ ಘೋಷ್ ಮತ್ತು ಸುಜಾತಾ ಮೊಹಾಪಾತ್ರ ಅವರಂತಹ ಅನೇಕ ಹಿರಿಯ ಗುರುಗಳು, ನೃತ್ಯ ಕಲಾವಿದರು ಮತ್ತು ಗಣ್ಯರು ಈ ಕಲಾ ಪ್ರಪಂಚವನ್ನು ಆಶೀರ್ವದಿಸಿ ಈ ಹಬ್ಬ ಯಶಸ್ವಿಯಾಗಲು ಆಗಮಿಸುತ್ತಿದ್ದಾರೆ.
ಬೆಂಗಳೂರಿನ ಕಲಾ ಪ್ರೇಮಿಗಳು ರಾಗದ ಲಯಬದ್ಧತೆ ಮತ್ತು ಸಾಹಿತ್ಯದ ಚಲನೆಗಳೊಂದಿಗೆ ಅನುಗ್ರಹ, ರಾಗ, ಲಯ ಮತ್ತು ಅಭಿವ್ಯಕ್ತಿಯನ್ನು ವ್ಯಕ್ತಪಡಿಸಲು, ಜಗತ್ತಿನ ಸೌಂದರ್ಯ ಮತ್ತು ಆನಂದವನ್ನು ನೀಡಲು ವರ್ಷದ ಆವೃತ್ತಿಯಾದ ಪ್ರಖ್ಯಾತ ಒಡಿಸ್ಸಿ ನೃತ್ಯ ಹಬ್ಬ, ನಮನ 2018ರಲ್ಲಿ ಉತ್ಕøಷ್ಟ ಒಡಿಸ್ಸಿ ನೃತ್ಯಪಟುಗಳು ಶ್ರೇಷ್ಠ ಶ್ರೇಣಿಯಾದ ಈ ಕಾರ್ಯಕ್ರಮಕ್ಕಾಗಿ ಬೆಂಗಳೂರಿನ ಕಲಾಪ್ರೇಮಿಗಳು ಕಾತರದಿಂದ ಕಾದಿದ್ದು ಅದನ್ನು ಒಡಿಸ್ಸಿ ಪ್ರಪಂಚದ ಪ್ರಮುಖ ಕಾಳವಿದರು ನೀಡಲಿದ್ದಾರೆ.
ನಮನ ಕಾರ್ಯಕ್ರಮವು ಎಲ್ಲಾ ವಿಧವಾದ ಶೈಲಿ ಮತ್ತು ಒಡಿಸ್ಸಿ ನೃತ್ಯ ಶಾಲೆಗಳನ್ನು ಒಂದಾಗಿ ತರುವ ಉದ್ದೇಶವಾಗಿದೆ. 2010ರಲ್ಲಿ ಒಡಿಸ್ಸಿ ನೃತ್ಯ ಗುರುಗಳಾದ ಗುರು ಗಂಗಾಧರ ಪ್ರಧಾನ ಅವರಿಂದ ಉದ್ಘಾಟಿಸಲ್ಪಟ್ಟ ಈ ಹಬ್ಬವು ಇಂದು ರಾಷ್ಟ್ರದಲ್ಲೇ ಒಂದು ಅತ್ಯುತ್ತಮ ಕಾರ್ಯಕ್ರಮವಾಗಿ ರೂಪುಗೊಂಡಿದೆ.
ಕವಿ ಜಯದೇವ ವಿರಚಿತ ಗೀತ ಗೋವಿಂದ ಸಾಹಿತ್ಯವು ಒಡಿಸ್ಸಿ ನೃತ್ಯದ ಪ್ರಧಾನ ಅಭಿನಯವಾಗಿದೆ. ಇಂಪಾದ ಸಂಗೀತದಿಂದ ಕೂಡಿದ ನೃತ್ಯವು ಸಾಹಿತ್ಯದ ಸೌಂದರ್ಯದೊಂದಿಗೆ ಪ್ರೇಕ್ಷಕರ ಮನ ರಂಜಿಸುತ್ತದೆ.
ಈ ಕಾರ್ಯಕ್ರಮವು ತನ್ನ ಅದ್ಭುತ ನೃತ್ಯ ಮತ್ತು ನೃತ್ಯ ಸಂಯೋಜನೆಯಿಂದ ಬೆಂಗಳೂರಿನ ಕಲಾ ರಸಿಕರ ಕಣ್ತಂಪು ಮಾಡುತ್ತದೆ.
ಭುವನೇಶ್ವರದಿಂದ ಬಂದಿರುವ ಯುವ ಪ್ರತಿಭಾವಂತ ಕಲಾವಿದ ಬಿಜನ್ ಕುಮಾರ್ ಪಾಲೈ ಅವರು ಪುರುಷ ಕಲಾವಿದರಲ್ಲಿ ಪ್ರಥಮರು. ಅವರು ತಮ್ಮ ನೃತ್ಯವನ್ನು ತುಂಬು ಶಕ್ತಿಯಿಂದ ಪ್ರೇಕ್ಷಕರ ಮನವನ್ನು ಹಿಡಿದಿಡುತ್ತಾರೆ.
ಕಲ್ಕತ್ತಾದಿಂದ ಆಗಮಿಸಲಿರುವ ಶಾಶ್ವತಿ ಗರಾಯ್ ಘೋಷ್ ಅವರು ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಅನುಯಾಯಿಯಾಗಿದ್ದು, ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ ಯುವ ಪುರಸ್ಕಾರವನ್ನು ಪಡೆದಿದ್ದಾರೆ.
ಸುಜಾತಾ ಮೊಹಾಪಾತ್ರ ಇಂದು ಒಡಿಸ್ಸಿ ನೃತ್ಯದಲ್ಲಿ ಪ್ರಮಖವಾಗಿ ಕೇಳಿ ಬರುವ ಹೆಸರು. ನಿಖರತೆಗೆ ಪ್ರಸಿದ್ಧಿಯಾಗಿರುವ ಅವರ ಭಾವ ಭಂಗಿ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿ ಕಲಾರಸಿಕರಿಗೆ ತಮ್ಮ ನೃತ್ಯದ ಮೂಲಕ ರಸದೌತಣ ಬಡಿಸಲಿದ್ದಾರೆ.