ಬೆಂಗಳೂರು, ಆ.9-ಹಜ್ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸಿದ ಆರೋಪದ ಮೇಲೆ ತಿಲಕನಗರ ಪೆÇಲೀಸರು, ಹರೀಮ್ ಟ್ರಾವೆಲ್ಸ್‍ನ ಮಾಲೀಕ ಸೇರಿ 6 ಮಂದಿ ಆರೋಪಿಗಳನ್ನು ಬಂಧಿಸಿ 114 ಪಾಸ್‍ಪೆÇೀರ್ಟ್‍ಗಳನ್ನು ಜಪ್ತಿ ಮಾಡಿದ್ದಾರೆ.
ಹರೀಮ್ ಟ್ರಾವೆಲ್ಸ್ ಮಾಲೀಕ ಸಿಗ್ಮತುಲ್ಲಾ ಶರೀಫ್, ಅವರ ಇಬ್ಬರು ಮಕ್ಕಳಾದ ಮುಹಮ್ಮದ್ ರಿಜ್ವಾನ್ ಮತ್ತು ರಹ್ಮಾನ್, ತೌಶೀಫ್, ಮಹಮ್ಮದ್ ಮಾಜಾ, ಮುಹಮ್ಮದ್ ಉಮೈರ್ ಬಂಧಿತ ಆರೋಪಿಗಳು.
ಸುಮಾರು 114 ಹಜ್ ಯಾತ್ರಾರ್ಥಿಗಳಿಂದ 2 ಲಕ್ಷ ರೂ., 3 ಲಕ್ಷ ರೂ.ಸೇರಿದಂತೆ ಕೋಟ್ಯಂತರ ರೂಪಾಯಿ ಹಣ ಪಡೆದು ಪಾಸ್‍ಪೆÇೀರ್ಟ್‍ಗಳನ್ನು ಸಹ ತೆಗೆದುಕೊಂಡಿದ್ದರು. ಆದರೆ ಇತ್ತೀಚೆಗೆ ಟ್ರಾವೆಲ್ಸ್‍ನ ಕಚೇರಿಗೆ ಬೀಗ ಹಾಕಲಾಗಿತ್ತು. ಇದರಿಂದ ಕಂಗಾಲಾದ ಹಜ್ ಯಾತ್ರಾರ್ಥಿಗಳು ತಿಲಕ್‍ನಗರ ಪೆÇಲೀಸರಿಗೆ ದೂರು ನೀಡಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ತಿಲಕ್‍ನಗರ ಪೆÇಲೀಸರು ಟ್ರಾವೆಲ್ಸ್ ಮಾಲೀಕ ಮತ್ತು ಇತರ ಆರೋಪಿಗಳಿಗೆ ತೀವ್ರ ಶೋಧ ನಡೆಸಿ ಬಂಧಿಸಿದ್ದಾರೆ ಎಂದು ಡಿಸಿಪಿ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.