ಭಾರತವೆಂದರೆ ಮೊದಲು ಧಾರ್ಮಿಕ ನಂತರ ಅಭಿವೃದ್ಧಿ : ಸಚಿವ ಯು.ಟಿ. ಖಾದರ್

ಹುಬ್ಬಳ್ಳಿ-: ಹುಬ್ಬಳ್ಳಿ-ಧಾರವಾಡ ಅವಳಿ ನಗರವು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತಿ ಪಡೆಯಲಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಹೇಳಿದರು.

ಹುಬ್ಬಳ್ಳಿಗೆ ಭೆಟಿ ನೀಡಿದ ಸಚಿವರು ಅವಳಿ ನಗರಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನ ಪರಿಶೀಲನೆ ನಡಿಸಿದರು. ಸಂಬಂಧಪಟ್ಟ ಅಧಿಕಾರಿಗಳಿಂದ ಯೋಜನೆಗಳ ಮಾಹಿತಿ ಪಡೆದರು. ನಂತರ ಹುಬ್ಬಳ್ಳಿಯ ಖಾಸಗಿ ಹೊಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವಳಿ ನಗರದ ಸಮಸ್ಯೆಗಳು ಹಾಗೂ ಕೈಗೊಂಡ ಅಭಿವೃದ್ಧಿ ಕಾಮಗಾರಿ ಕುರಿತು ಮಾತನಾಡಿದರು. ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಮಧ್ಯೆ ಕೈಗೊಂಡಿರುವ ಬಿಆರ್.ಟಿಎಸ್. ಯೋಜನೆಯು ನವೆಂಬರ್ 1 ರಂದು ಸಂಚಾರ ಪ್ರಾರಂಭಿಸಲಿದೆ ಎಂದರು. ಈ ಸಂಬಂಧ ಪತ್ರಕರ್ತರೊಬ್ಬರು ಮಾತನಾಡಿ ಕಳೆದ 6 ವರ್ಷಗಳಿಂದ ಇದನ್ನೆ ಹೇಳಲಾಗುತ್ತಿದೆ. 600ಕೋಟಿ ಇದ್ದ ಯೋಜನೆಯ ಮೊತ್ತ 900ಕೋಟಿಗೆ ಏರಿದೆ. ಅಷ್ಟೇ ಅಲ್ಲದೇ ಈ ಭಾಗದಲ್ಲಿ ಕೆಲ ಧಾರ್ಮಿಕ ಕಟ್ಟಡಗಳು ಇವೆ. ಅವುಗಳನ್ನು ಸ್ಥಳಾಂತರ ಮಾಡುವ ವಿಚಾರವಾಗಿ ಈ ಯೋಜನೆ ಇನ್ನಷ್ಟು ವಿಳಂಬವಾಗಿದೆ. ಈ ಬಗ್ಗೆ ಯಾವ ರೀತಿ ಸಮಸ್ಯೆ ಬಗೆ ಹರಿಸುತ್ತೀರಿ ಎಂದು ಸಚಿವರಿಗೆ ಪ್ರಶ್ನೆ ಹಾಕಿದ್ರು.? ಇದಕ್ಕೆ ಉತ್ತರಿಸಿದ ಸಚಿವರು, ಭಾರತವೆಂದರೆ ಮೊದಲು ಧಾರ್ಮಿಕತೆ ನಂತರ ಅಭಿವೃದ್ಧಿ. ಹೀಗಾಗಿ ಈ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಒಂದುವೇಳೆ ನಂವೆಂಬರ್ 1ರಂದು ಯೋಜನೆ ಜಾರಿಯಾಗಿ ರಸ್ತೆ ಸಂಚಾರ ಪ್ರಾರಂಭ ಆಗದೇ ಇದ್ದರೆ, ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗುವುದು. ಮತ್ತು ಬಿ.ಆರ್.ಟಿ.ಎಸ್ ಅಧಿಕಾರಿಗಳೇ ಇದರ ಹೊಣೆಗಾರರಾಗುವರು ಎಂದು ಹೇಳಿದ್ರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಕಾರದಿಂದ ರಾಜ್ಯದಲ್ಲಿ 63 ಸಾವಿರ ಮನೆಗಳು ನಿರ್ಮಾಣ ಮಾಡಲಾಗ್ತಾಯಿದೆ. ಇದರಲ್ಲಿ ಉತ್ತರ ಕರ್ನಾಟಕದಲ್ಲಿ 22 ಸಾವಿರ ಮನೆಗಳು ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ. ಈ ಯೋಜನೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಹುಬ್ಬಳ್ಳಿಯಿಂದಲೇ ಚಾಲನೆ ನೀಡಲಿದ್ದಾರೆ ಎಂದರು. ಇನ್ನು ಹುಬ್ಬಳ್ಳಿ- ಧಾರವಾಡ ನಗರಕ್ಕೆ ಕುಡಿಯುವ ನೀರಿನ ಯೋಜನೆಗೆ ಪಾಲಿಕೆಯಿಂದ ಬೇಡಿಕೆ ಇಟ್ಟಿರುವ, 24 ಕೋಟಿ ಹಣವನ್ನು ಹದಿನೈದು ದಿನದಲ್ಲಿ ಬಿಡುಗಡೆ ಹಾಗೂ ಇಂದರಾ ಕ್ಯಾಂಟೀನಗಳನ್ನು ಉದ್ಘಾಟನೆ ಮಾಡಲಾಗುವುದು ಎಂದರು. ಇನ್ನು ಉತ್ತರ ಕರ್ನಾಟಕ ಪ್ರತ್ಯೇಕತೆ ಬಗ್ಗೆ ಮಾತನಾಡಿದ ಅವರು, ನಾವು ಅಖಂಡ ಕರ್ನಾಟಕದ ಪರವಾಗಿದ್ದೇವೆ. ರಾಜಕೀಯಕ್ಕಾಗಿ ರಾಜ್ಯವನ್ನು ಇಬ್ಬಾಗ ಮಾಡುವುದು ರಾಜ್ಯಕ್ಕೆ ದ್ರೋಹ ಮಾಡಿದಂತೆ. ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ಅಖಂಡ ಕರ್ನಾಟಕ ನಿರ್ಮಾಣವಾಗಿದೆ. ಹೀಗಾಗಿ ಅಖಂಡ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸೋಣ ಎಂದರು. ಈ ಸಂದರ್ಭದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಇತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ