ಇಂದಿಂನಿಂದ ಕ್ರಿಕೆಟ್  ಕಾಶಿಯಲ್ಲಿ ಇಂಡೋ- ಆಂಗ್ಲೋ ಕದನ 

ಲಂಡನ್​:  ಟೀಂ ಇಂಡಿಯಾ  ಮತ್ತು  ಆಂಗ್ಲರ  ನಡುವೆ    ಮತ್ತೊಂದು ಮಹಾ ಕದನ  ಇಂದಿನಿಂದ  ಕ್ರಿಕೆಟ್  ಕಾಶಿ  ಲಾರ್ಡ್ಸ್  ಅಂಗಳದಲ್ಲಿ  ನಡೆಯಲಿದೆ. ಈ  ಮದಗಜಗಗಳ  ಕಾದಾಟವನ್ನ  ವೀಕ್ಷಿಸಲು  ಇಡೀ  ವಿಶ್ವವೇ  ಕಾತರದಿಂದ  ಕಾದು ಕುಳಿತಿದೆ.  ಕ್ರಿಕೆಟ್​  ಕಾಶಿಯಲ್ಲಿ  ನಡೆಯಲಿರುವ  ಮಹಾ ಕದನಕ್ಕೆ  ಉಭಯ  ತಂಡಗಳು  ಹೇಗೆ  ಸಜ್ಜಾಗಿವೆ  ಅನ್ನೋ  ಕಂಪ್ಲೀಟ್  Detailsನ್ನ   ನಾವ್  ಕೊಟ್ತೀವಿ  ನೋಡಿ.

ಕ್ರಿಕೆಟ್​ ಕಾಶಿಯಲ್ಲಿ  ಇಂಡೋ –  ಆಂಗ್ಲೋ ವಾರ್

ಟೀಂ ಇಂಡಿಯಾ  ಮತ್ತು  ಆಂಗ್ಲರ ನಡುವಿನ ಮಹಾ ಕದನಕ್ಕೆ  ಇನ್ನು  ಕೆಲವೇ  ಗಂಟೆಗಳು ಬಾಕಿ ಇವೆ.  ಉಭಯ ತಂಡಗಳು   ​ಒಬ್ಬರಿಗೊಬ್ಬರು  ಕೌಂಟರ್  ಕೊಡಲು  ಮಾಸ್ಟರ್   ಪ್ಲಾನ್​ ನೊಂದಿಗೆ  ಸಜ್ಜಾಗಿವೆ.  ಟೀಂ ಇಂಡಿಯಾ  ಆಟಗಾರರು  left ArM  Pacer  ಸ್ಯಾಮ್  ಕರನ್  ಎದುರಿಸಲು  ಅರ್ಜುನ್  ತೆಂಡೂಲ್ಕರ್  ನೆರವಿನೊಂದಿಗೆ  ಬ್ಯಾಟಿಂಗ್ ಅಭ್ಯಾಸ  ಮಾಡಿದ್ರೆ . ಇತ್ತ  ಆಂಗ್ಲರು  ಅಶ್ವಿನ್  ಎದುರಿಸಲು  ಮರ್ಲಿನ್  ಮಷೀನ್  ಮೊರೆ  ಹೋಗಿದ್ದಾರೆ.

ಲಕ್ಕಿ  ಪಿಚ್​ನಲ್ಲಿ  ಗೆಲ್ಲುತ್ತಾ  ಟೀಂ ಇಂಡಿಯಾ ?

ಟೀಂ ಇಂಡಿಯಾ  ಮತ್ತು   ಆಂಗ್ಲರ  ನಡುವಿನ  ಎರಡನೇ  ಟೆಸ್ಟ್ ಪಂದ್ಯ ಇಂದಿನಿಂದ  ಲಾರ್ಡ್ಸ್  ಅಂಗಳದಲ್ಲಿ  ನಡೆಯಲಿದೆ.  ಈ  ಕ್ರಿಕೆಟ್  ಕಾಶಿಯ  ಸ್ಪೆಶಲ್​  ಏನಂದ್ರೆ  ಪಾಲಿಗೆ  ಯಾವಗಲೂ  ಲಕ್ಕಿ ಪಿಚ್.  1983ರಲ್ಲಿ  ಟೀಂ ಇಂಡಿಯಾ  ಇದೇ  ಅಂಗಳದಲ್ಲಿ   ಮೊದಲ  ವಿಶ್ವ ಗೆದ್ದು ಬೀಗಿದ್ದು.  ಇಷ್ಟೆ  ಅಲ್ಲ  ಅನೇಕ  ಪಂದ್ಯಗಳನ್ನ   ರೊಚಕವಾಗಿ   ಗೆದ್ದು   ಬೀಗಿದ್ದು   ಇದೇ  ಅಂಗಳದಲ್ಲಿ  ಈ  ಕಾರಣಕ್ಕಾಗಿ   ಆಂಗ್ಲರ  ಈ  ಬಾರಿಯು  ಲಾರ್ಡ್ಸ್  ಲಕ್  ತಂದುಕೊಡುತ್ತಾ  ಅನ್ನೋದೇ ಮಿಲಿಯನ್  ಡಾಲರ್  ಪ್ರಶ್ನೆಯಾಗಿದೆ.

ಗಾಯಗೊಂಡ  ಹುಲಿಯಂತಾಗಿದೆ   ಕೊಹ್ಲಿ  ಪಡೆ

ಯಾವುದೇ  Angleನಿಂದ  ನೋಡಿದ್ರು  ಮೊನ್ನೆ  ನಡೆದ  ಬರ್ಮಿಂಗ್ಯಾಮ್  ಟೆಸ್ಟ್  ಪಂದ್ಯದಲ್ಲಿ  ಟೀಂ ಇಂಡಿಯಾವೇ  ಗೆಲ್ಲಬೇಕಾಗಿತ್ತು .  ಆದ್ರೆ  ಕತೆ ಆಗಿದ್ದೆ  ಬೇರೆ . ಸಿಕ್ಕ  ಅವಕಾಶಗಳನ್ನ  ಕೈಚೆಲ್ಲಿದ್ದಲ್ಲದೇ  194 ರನ್​ಗಳ  ಸುಲಭ ಟಾರ್ಗೆಟನ್ನ  ಕೂಡ  ಬೆನ್ನತ್ತಲಾಗದೇ  34 ರನ್​ಗಳ  ವಿರೋಚಿತ ಸೋಲು ಅನುಭವಿಸಿಬೇಕಾಯಿತು.

ಕ್ಯಾಪ್ಟನ್  ಕೊಹ್ಲಿಯನ್ನ  ಕೆರೆಳಿಸಿದ  ಇಂಗ್ಲೆಂಡ್  ಅಭಿಮಾನಿಗಳು..!

ಆಂಗ್ಲರ  ವಿರುದ್ಧ  ಮೊದಲ  ಪಂದ್ಯ  ಸೋತು  ನಿರಾಸೆ  ಅನುಭವಿಸಿದ್ದ  ವಿರಾಟ್  ಸೈನ್ಯಕ್ಕೆ  ಇಂಗ್ಲೆಂಡ್  ಕ್ರಿಕೆಟ್ ಅಭಿಮಾನಿಗಳು  ಕೆರೆಳಿಸಿದ್ದಾರೆ. ಬರ್ಮಿಂಗ್ಯಾಮ್  ಪಂದ್ಯ  ಮುಗಿದ  ಬಳಿಕ  ಹೋಟೇಲ್ ರೂಮ್​ಗೆ  ತೆರೆಳಲು  ಬಸ್​ನಲ್ಲಿ   ಹೋಗುತ್ತಾಗಿದ್ದಾಗ  ಬಸ್ n್ನ ತಡೆದು  ಇಂಗ್ಲೆಂಡ್ ಅಭಿಮಾನಿಗಳು ಕೊಹ್ಲಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಇದು ಕೊಹ್ಲಿ  ಪಡೆಯನ್ನ  ಇನ್ನಷ್ಟು  ಕೆರೆಳಿಸಿದ್ದು  ಗಾಯದ ಮೇಲೆ  ಬರೆ  ಎಳೆದಂತಾಗಿದೆ.

ಕ್ಯಾಪ್ಟನ್  ಕೊಹ್ಲಿಗೆ ತಲೆ ನೋವಾಗಿದೆ  ಬ್ಯಾಟಿಂಗ್  ಚಿಂತೆ

ಟೀಂ ಇಂಡಿಯಾ ನಾಯಕ  ವಿರಾಟ್  ಕೊಹ್ಲಿಗೆ ದೊಡ್ಡ  ತಲೆ ನೋವೆಂದರೆ  ತಂಡದ  ಬ್ಯಾಟಿಂಗ್  ವೈಫಲ್ಯ.  ಮೊದಲ  ಟೆಸ್ಟ್  ಕೊಹ್ಲಿ  ಪಡೆ  ಸೋಲಲು ಕಾರಣವಾಗಿದ್ದು   ಟಾಪ್​  ಆರ್ಡರ್  ಬ್ಯಾಟ್ಸ್ ಮನ್​ಗಳ  Back To  Back Failure. ಓಪನರ್​  ಶಿಖರ್​ ಧವನ್  ಫಾರ್ಮ್​  ಸಮ್ಯೆಯಿಂದ ಬಲಳಿದ್ರೆ  ಕನ್ನಡಿಗ  ಕೆ.ಎಲ್​. ರಾಹುಲ್,   ಮಿಡ್ಲ್ ಸ್ಲಾಟ್​ನಲ್ಲಿ  ಅಜಿಂಕ್ಯ ರಹಾನೆ  ಮತ್ತು  ವಿಕೆಟ್  ಕೀಪರ್  ದಿನೇಶ್ ಕಾರ್ತಿಕ್  ಬ್ಯಾಕ್  ಟು  ಬ್ಯಾಕ್  ಫ್ಲಾಪ್  ಆಗಿದ್ದಾರೆ. ಹೀಗಾಗಿ ಧವನ್  ಬದಲಿಗೆ  Mister  Dependable  ಚೇತೇಶ್ವರ  ಪುಜಾರ ಅವರನ್ನ  ಆಡಿಸುತ್ತಾರಾ ?  ಅಥವಾ  ರಾಹುಲ್​ನ್ನ  ಕೈಬಿಡ್ತಾರಾ ಅನ್ನೋದೇ  ಪ್ರಶ್ನೆಯಾಗಿದೆ.

ಇನ್ನು  ಬೌಲಿಂಗ್  ಡಿಪಾರ್ಟ್ ಂಟ್​ನಲ್ಲಿ    ಸಾಕಷ್ಟು  ಬದಲಾವಣೆಗಳು  ಸಾಧ್ಯತೆ  ಇದೆ.  ಬೌಲರ್​ಗಳಿಗೆ ಹೆಚ್ಚು ನೆರವು ನೀಡುವ ಲಾರ್ಡ್ಸ್  ಅಂಗಳದಲ್ಲಿ  ಬೌಲೀಮಗ್  ಸ್ಟ್ರಾಟೆಜಿ  ಬಗ್ಗೆ  ಕ್ಯಾಪ್ಟನ್   ಕೊಹ್ಲಿ  ಮರು ಚಿಂತನೆ  ನಡೆಸಬೇಕಿದೆ.  ಮೊದಲ  ಟೆಸ್ಟ್ ನಲ್ಲಿ  ತಂಡದ  ಬ್ಯಾಟಿಂಗ್  ಕೈಕೊಟ್ಟರೂ  ತಂಡದ  ಬೌಲಿಂಗ್  ಡಿಪಾರ್ಟ್​ಮೆಂಟ್​ ಸೂಪರ್  ಸ್ಪೆಲ್  ಮಾಡಿ ಆಂಗ್ಲ  ಬ್ಯಾಟಿಂಗ್  Line up  collapse  ಮಾಡಿ ತಂಡಕ್ಕೆ  ಗೆಲ್ಲುವ  ಉತ್ಸಾಹ ನೀಡಿತ್ತು.  2ನೇ  ಕದನಕ್ಕೆ  extra  batsman  ಬದಲು ಎರಡನೇ ಸ್ಪಿನ್ನರ್ ಕಣಕ್ಕಿಳಿಸುವ  ಬಗ್ಗೆ  ಬೌಲಿಂಗ್  ಕೋಚ್ ಭರತ್  ಅರುಣ್  ಸುಳಿವು  ನೀಡಿದ್ದಾರೆ.   ಐದು  ಬೌಲರ್​ಗಳನ್ನ  ಕಣಕ್ಕಿಳಿಸುತ್ತಾರಾ  ಕ್ಯಾಪ್ಟನ್  ಕೊಹ್ಲಿ ಅನ್ನೊದನ್ನ ಕಾದು ನೋಡಬೇಕಿದೆ.

ಆಂಗ್ಲರನ್ನ  ಕಾಡ್ತಿದೆ  ಸೋಲಿನ ಭಯ

ಬರ್ಮಿಂಗ್ಯಾಮ್​  ಟೆಸ್ಟ್  ಪಂದ್ಯದಲ್ಲಿ  ರೋಚಕ ಗೆಲುವು ಸಾಧಿಸಿ   ಕಾನ್ಫಿಡೆನ್ಸ್  ಹೆಚ್ಚಿಸಿಕೊಳ್ಳಬೇಕಾದ  ಆಂಗ್ಲರು  ಲಾರ್ಡ್ಸ್  ಕಕನದಕ್ಕೂ  ಮುನ್ನವೇ  ಕಂಗಾಲಾಗಿ ಹೋಗಿದ್ದಾರೆ.  ಇದಕ್ಕೆ  ಕಾರಣ  ಲಾರ್ಡ್ಸ್  ಅಂಗಳ  ಕಳೆದ  ಆಂಗ್ಲರಿಗೆ  ಕಳೆದ  ಎಂಟು  ವರ್ಷಗಳಿಂದ  ಅನ್​ ಲಕ್ಕಿ  ಪಿಚ್  ಆಗಿದೆ.  2011ರಿಂದ  ಏಷ್ಯಾ ತಂಡಗಳ  ಎದುರು  ಇಂಗ್ಲೆಂಡ್  ಗೆದ್ದಿಲ್ಲ.  ಇದು  ಆಂಗ್ಲರನ್ನ  ಒತ್ತಡದಲ್ಲಿ  ಸಿಲುಕುವಂತೆ ಮಾಡಿದೆ.

ಎರಡು  ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದ್ದಾರೆ  ಆಂಗ್ಲರು

ಕ್ಯಾಪ್ಟ್ ನ್  ಜೋ  ರೂಟ್​ಗೆ  ತಂಡದ ಅನುಭವಿ  ಬ್ಯಾಟ್ಸ್ ಮನ್  ಅಲೆಸ್ಟರ್  ಕುಕ್  ಅವರದ್ದೆ  ಚಿಂತೆಯಾಗಿದೆ.  ಮೊದಲ  ಟೆಸ್ಟ್ ನಲ್ಲಿ   ಅಲೆಸ್ಟರ್  ಕುಕ್  ಆಡಿದ  ಎರಡೂ  ಇನ್ನಿಂಗ್ಸ್ ಗಳಲ್ಲೂ ಸ್ಪಿನ್ ಮ್ಯಾಜಿಷಿಯನ್  ಆರ್. ಅಶ್ವಿನ್ ಗೆ ಬೌಲ್ಡ್  ಆಗಿದ್ರು.  ಇದರಿಂದಾಗಿ  ತಂಡಕ್ಕೆ ಒಳ್ಳೆ  ಓಪನಿಂಗ್  ಸಿಗುತ್ತಿಲ್ಲ.  ಇನ್ನು  ತಂಡದ ಟಾಪ್​ ಆರ್ಡರ್  ಬ್ಯಾಟ್ಸ್ ಮನ್  ಬದಲು   ದಾವಿದ್ ಮಲನ್  ಬದಲು  ಸರ್ರೆ  ತಂಡದ  ಯುವ ಆಟಗಾರ  ಒಲ್ಲಿ   ಪೊಪ್​ಗೆ  ಅವಕಾಶ  ಸಿಗಲಿದೆ.  ತಂಡದ ಆಲ್​ರೌಂಡರ್  ಬೆನ್​ಸ್ಟೋಕ್ಸ್ ಬದಲು  ತಂಡದ ಮತ್ತೋರ್ವ ಆಲ್​ರೌಂಡರ್  ಕ್ರಿಸ್​  ವೋಕ್ಸ್  ಆಡಲಿದ್ದಾರೆ.

ಮತ್ತೆ  ಮರುಕಳಿಸುತ್ತಾ  2014ರ ಇತಿಹಾಸ

ನಾಲ್ಕು  ವರ್ಷಗಳ  ಹಿಂದೆ  ಧೋನಿ ನೇತೃತ್ವದ ಟೀಂ ಇಂಡಿಯಾ ಲಾರ್ಡ್ಸ್ ಅಂಗಳದಲ್ಲಿ  ಆಂಗ್ಲರ  ವಿರುದ್ದ  ನಡೆದ  ಎರಡನೇ  ಟೆಸ್ಟ್  ಪಂದ್ಯದಲ್ಲಿ   ಟೀಂ ಇಂಡಿಯಾ 86 ರನ್​ಗಳ  ಭರ್ಜರಿ  ಗೆಲುವು ದಾಖಲಿಸಿತು.  ಇದಕ್ಕೂ  ಮುನ್ನ  ಕಪಿಲ್  ದೇವ್  ಲಾಡರ್ಸ್  ಅಂಗಳದಲ್ಲಿ  ಆಂಗ್ಲರ ವಿರುದ್ದ  ಟೆಸ್ಟ್ ನಲ್ಲಿ  ವಿಜಯ ಪತಾಕೆ ಹಾರಿಸಿದ್ದರು.  ಇದೀಗ  ಈ ಸಾಧನೆಯನ್ನ  ವಿರಾಟ್ ಕೊಹ್ಲಿ ಮಾಡ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

ಲಾರ್ಡ್ಸ್ ಅಂಗಳದಲ್ಲಿ  ಆಂಗ್ಲರದ್ದೆ ದರ್ಬಾರ್

ಪಂದ್ಯಗಳು      16

ಇಂಗ್ಲೆಂಡ್        11

ಟೀಂ ಇಂಡಿಯಾ             2

ಡ್ರಾ                   3

ಇದುವರೆಗೂ  ಲಾರ್ಡ್ಸ್  ಅಂಗಳದಲ್ಲಿ   ಟೀಂ ಇಂಡಿಯಾ  ಮತ್ತು   ಇಂಗ್ಲೆಂಡ್  ತಂಡಗಳು  ಟೆಸ್ಟ್ ನಲ್ಲಿ  16 ಬಾರಿ  ಮುಖಾಮುಖಿಯಾಗಿವೆ. ಈ 16 ಮುಖಾಮುಖಿಯಲ್ಲಿ  ಆತಿಥೇಯ  ಇಂಗ್ಲೆಂಡ್  11  ಬಾರಿ  ಗೆದ್ರೆ ,  ಟೀಂ ಇಂಡಿಯಾ  ಕೇವಲ 2 ಬಾರಿ  ಮಾತ್ರ ಗೆದ್ದಿದೆ.  ಮೂರು  ಪಂದ್ಯಗಳು ಡ್ರಾನಲ್ಲಿ  ಕಂಡಿವೆ.

ಒಟ್ಟಾರೆ  ಕೊಹ್ಲಿ ಸೈನ್ಯ  ತನ್ನ  ಲಕ್ಕಿ ಪಿಚ್ ನಲ್ಲಿ   ಆಂಗ್ಲರನ್ನ ಮಣಿಸಿ   ಸರಣಿಯಲ್ಲಿ  1-1  ಸಮಬಲ ಸಾಧಿಸುತ್ತಾ  ಅನ್ನೋದನ್ನ  ಕಾದು  ನೋಡಬೇಕಿದೆ

 

 

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ