ಬೆಂಗಳೂರು ಮೂಲದ ಚೆಸ್ ಮಾಸ್ಟರ್ ಗೆ  ಇಂಗ್ಲೆಂಡ್ ತೊರೆಯುವ ಭೀತಿ

ಲಂಡನ್: ಅತ ಬೆಂಗಳೂರು ಮೂಲದ ಲಂಡನ್‍ನಲ್ಲಿ ನೆಲೆಸಿರುವ ಚೆಸ್ ಮಾಸ್ಟರ್.ಆತನಿಗೆ ಬ್ರಿಟನ್‍ನ ವಲಸೆ ನೀತಿಯಿಂದಾಗಿ ಆಂಗ್ಲರ ನಾಡನ್ನೆ ತೊರೆಯುವ ಸಂದರ್ಭ ಒದಗಿ ಬಂದಿದೆ.

9 ವರ್ಷದ ಶ್ರೇಯಸ್ ರಾಯಲ್ ತನ್ನ ಪೀಳಿಗೆಯ ವಿಶ್ವದ ನಾಲ್ಕನೆ ರ್ಯಾಂಕ್ ಆಟಗಾರ. ಬೆಂಗಳೂರಿನಲ್ಲಿ ಹುಟ್ಟಿದ ಶ್ರೆಯಸ್ 3ನೇ ವಯಸ್ಸಿನಲ್ಲಿ ಅಪ್ಪನೊಂದಿಗೆ ಇಂಗ್ಲಂಡ್‍ಗೆ ತೆರೆಳಿದರು.

ಅಪ್ಪ ಜೀತೇಂದ್ರ ಸಿಂಗ್ ಟಿಸಿಎಸ್ ಕಂಪೆನಿಯಲ್ಲಿ ಐಟಿ ಮ್ಯಾನೇ

ಜರ್ ಅವರ ವಾರ್ಷಿಕ ಆದಾಯ ಇಂಗ್ಲೆಂಡ್‍ನಲ್ಲಿ ಜೀವನ ಮಾಡಲು ಬಿಡುತ್ತಿಲ್ಲ. ಇದರ ಜೊತೆಗೆ ವೀಸಾ ಅವಧಿ ಸೆಪ್ಟೆಂಬರ್ ವೇಳೆಗೆ ಮುಗಿಯಲಿದೆ. ಜೀತೇಂದ್ರ ಸಿಂಗ್ ವಾರ್ಷಿಕ ಆದಾಯ 120,000 ಡಾಲರ್ ಗಳಿಸದಿದ್ದರೇ ದೇಶ ಬಿಟ್ಟು ತೆರೆಳುವಂತೆ ಸರ್ಕಾರ ಸೂಚಿಸಿದೆ. ಶ್ರೇಯಸ್ ರಾಯಲ್‍ನ ಪೋಷಕರು ಈಗಾಗಲೇ ಗೃಹ ಕಚೇರಿಗೆ ನನ್ನ ಮಗ ರಾಷ್ಟ್ರೀಯ ಸಂಪತ್ತು. ಚೆಸ್‍ನಲ್ಲಿ ಭರವಸೆ ಮೂಡಿಸಿದ್ದಾನೆ. ನಮಗೆ ಇಲ್ಲಿ ಬದುಕಲು ಅವಕಾಶ ಕೊಡಿ ಎಂದು ಮನವಿ ಸಲ್ಲಿಸಿದ್ದಾರೆ.

ನೆರವಿಗೆ ಧಾವಿಸಿದ ಚೆಸ್ ಫೆಡರೇಶನ್ ಮತ್ತು ಸೋಶಿಯಲ್ ಮೀಡಿಯಾ

ಶ್ರೇಯಸ್ ರಾಯಲ್ ವಿಷಯ ಅಲ್ಲಿನ ಸೋಶಿಯಲ್ ಮೀಡಿಯಾದಲ್ಲೂ ಚೆರ್ಚೆ ಆಗಿದ್ದು ಟ್ಯಾಲೆಂಟ್ ಚೆಸ್ ಆಟಗಾರನನ್ನ ಕಳೆದುಕೊಳ್ಳಬಾರದೆಂದು ಸಲಹೆಗಳನ್ನ ನೀಡಲಾಗಿದೆ. ಅಲ್ಲಿನ ಚೆಸ್ ಫೆಡರೇಶ್‍ನ್ ಕೂಡ ಶ್ರೇಯಸನ್ನ ಉಳಿಸಲು ಸರ್ಕಾರಕ್ಕೆ ಮನವಿ ಮಾಡಿದೆ.

ಶ್ರೇಯಸ್ ಪರ ಬ್ರಿಟನ್ ಸಂಸದ ರಾಶೆಲ್ ರೀವ್ಸ್,ನಟ ಜಾನ್ ಕ್ಲೀಸ್ ಇಂಗ್ಲೆಂಡ್‍ನ ಗೃಹಸಚಿವಾಲಯಕ್ಕೆ ಮನವಿ  ಮಾಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ