ಸಾಲ ಭದೆಯಿಂದ ರೈತ ಅತ್ಮ ಹತ್ಯೆ

 

ದಾವಣಗೆರೆ, ಆ.8-ಸಾಲಬಾಧೆ ತಾಳಲಾರದೆ ರೈತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಗುಮ್ಮನೂರು ಗ್ರಾಮದ ನಿವಾಸಿ ನಾಗಬಸಮ್ಮ (66) ಆತ್ಮಹತ್ಯೆಗೆ ಶರಣಾಗಿರುವ ರೈತ ಮಹಿಳೆ.
ಈಕೆ ಕೃಷಿಗಾಗಿ ಗ್ರಾಮೀಣ ಬ್ಯಾಂಕ್‍ನಿಂದ 4 ಲಕ್ಷ, ವಿಜಯಾ ಬ್ಯಾಂಕ್‍ನಿಂದ 1 ಲಕ್ಷ, ಎಡಿಬಿ ಬ್ಯಾಂಕ್ ಸೇರಿದಂತೆ ಹಲವೆಡೆ ಸಾಲ ಮಾಡಿಕೊಂಡಿದ್ದರು. ಆದರೆ ಬೆಳೆ ಇಲ್ಲದೆ ಮನನೊಂದು ಈಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ