ಮುದ್ರಣಾಲಯಗಳಿಗೆ ಬೀಗ ಹಾಕುವುದರಿಂದ ಲಕ್ಷಾಂತರ ಕುಟುಂಬಗಳು ಬೀದಿಪಾಲು

ಬೆಂಗಳೂರು, ಆ.7-ಬಿಬಿಎಂಪಿ ಅಧಿಕಾರಿಗಳು ಮುದ್ರಣಾಲಯಗಳಿಗೆ ಬೀಗ ಹಾಕುವುದರಿಂದ ಲಕ್ಷಾಂತರ ಕುಟುಂಬಗಳು ಬೀದಿಪಾಲಾಗುತ್ತವೆ ಎಂದು ಕರ್ನಾಟಕ ರಾಜ್ಯ ಡಿಜಿಟಲ್ ಪ್ರಿಂಟರ್ಸ್ ಮತ್ತು ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೃಷ್ಣಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಉದ್ಯಮವನ್ನೇ ನಂಬಿ ಮಾಲೀಕರು, ಕಾರ್ಮಿಕರು ಸೇರಿದಂತೆ 10 ರಿಂದ 15 ಲಕ್ಷ ಜನ ತಮ್ಮ ಉದ್ಯೋಗ ಮತ್ತು ಜೀವನ ರೂಪಿಸಿಕೊಂಡಿದ್ದಾರೆ. ನ್ಯಾಯಾಲಯ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತರದೆ ಬೀಗ ಹಾಕಿರುವುದು ನ್ಯಾಯಸಮ್ಮತವಲ್ಲ. ತ್ವರಿತವಾಗಿ ಬೀಗ ಮುದ್ರೆ ತೆಗೆಸಿ ಯಂತ್ರಗಳನ್ನು ಪ್ರತಿದಿನ ಚಾಲನೆ ಮಾಡದಿದ್ದರೆ ಹಾಳಾಗುವ ಪರಿಸ್ಥಿತಿಗೆ ಬರುತ್ತವೆ. ಬಿಬಿಎಂಪಿ ಅಧಿಕಾರಿಗಳು ಬೀಗ ಮುದ್ರೆ ಹಾಕುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ವಿದೇಶಗಳಿಂದ ಬರುವಂತಹ ಪ್ಲಾಸ್ಟಿಕ್ ಕಚ್ಚಾವಸ್ತುಗಳು, ಎಲೆಕ್ಟ್ರಿಕ್ ವಸ್ತುಗಳಿಗೆ ಬಳಸುವ ಪ್ಲಾಸ್ಟಿಕ್‍ಗಳ ಬಳಕೆಯನ್ನು ನಿಲ್ಲಿಸಿ ಇದರಿಂದಾಗುವ ಪರಿಸರ ಹಾನಿಯನ್ನು ತಪ್ಪಿಸಬೇಕು. ಬಿಬಿಎಂಪಿ ಫ್ಲೆಕ್ಸ್ ಉದ್ಯಮ ನಿಲ್ಲಿಸುವುದಾದರೆ ಪ್ರತಿಯೊಂದು ಅಂಗಡಿ, ಸಂಸ್ಥೆ, ಕಾರ್ಖಾನೆ, ಸರ್ಕಾರಿ ಇಲಾಖೆಗಳ ನಾಮಫಲಕಗಳ ಫ್ಲೆಕ್ಸ್ ಪ್ರಿಂಟರ್‍ಗಳನ್ನು ತೆರವುಗೊಳಿಸಿ. ಇಲ್ಲದಿದ್ದರೆ ಈ ತಕ್ಷಣದಿಂದಲೇ ಸಂಘಸಂಸ್ಥೆಯು ಹೋರಾಟ ಮಾಡುವುದಾಗಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ