ಮದುವೆಯಾಗಲು ಪೆರೋಲ್ ನಿಡಿ ಎಂದ ಅಬು ಸಲೇಂ: ಅರ್ಜಿ ವಜಾಗೊಳಿಸಿದ ಕೋರ್ಟ್

FILE PHOTO: Abu Salem (C) is surrounded by policemen as he arrives at a court in the southern city of Hyderabad, India, December 20, 2007. REUTERS/Krishnendu Halder/File Photo

ಮುಂಬೈ:ಆ-7: ಮದುಯೆಯಾಗಬೇಕು ಹಾಗಾಗಿ 45 ದಿನಗಳ ಪೆರೋಲ್ ನೀಡಿ ಎಂದು 1993ರ ಸರಣಿ ಬಾಂಬ್ ಸ್ಪೋಟದ ಅಪರಾಧಿ ಭೂಗತ ಲೋಕದ ಪಾತಕಿ ಅಬು ಸಲೇಂ ಸಲ್ಲಿಸಿದ್ದ ಅರ್ಜಿಯನ್ನು ಮುಂಬೈ ಹೈಕೋರ್ಟ್ ವಜಾ ಮಾಡಿದೆ.

ಮುಂಬ್ರಾ ನಿವಾಸಿಯಾಗಿರುವ ಕೌಸರ್ ಬಹಾರ್ ಅವರನ್ನು ಮದುವೆಯಾಗಲು ಮುಂದಾಗಿರುವ ಅಬು ಸಲೇಂ ಸದ್ಯ ತಲೋಜಾ ಜೈಲಿನಲ್ಲಿದ್ದಾನೆ. ಈ ಹಿಂದೆ ಕೂಡ ಇದೇ ಕಾರಣಕ್ಕೆ ಅರ್ಜಿ ಸಲ್ಲಿಸಿದ್ದ. ಆದರದು ತಿರಸ್ಕೃತಗೊಂಡಿದ್ದು, ಅದನ್ನು ಪ್ರಶ್ನಿಸಿ ಆತ ಮೇಲ್ಮನವಿ ಸಲ್ಲಿಸಿದ್ದ.

2014ರಲ್ಲಿ ಕೋರ್ಟ್ ವಿಚಾರಣೆಗಾಗಿ ರೈಲಿನ ಮೇಲೆ ಲಖನೌಗೆ ಕರದೊಯ್ಯುತ್ತಿರುವಾಗ ಫೋನ್ ಮೂಲಕ ಕೌಸರ್‌ನನ್ನು ಮದುವೆಯಾಗಿರುವುದಾಗಿ ಸಲೇಂ ಈ ಹಿಂದೆ ಹೇಳಿದ್ದ. ಸಲೇಂ ಜತೆ ಮದುವೆಯಾಗಿದೆ ಎಂದು ಹರಿದಾಡಿದ್ದ ಸುದ್ದಿಯಿಂದಾಗಿ ನನ್ನ ಮಾನಹಾನಿಯಾಗಿದೆ. ಈ ನಷ್ಟ ತುಂಬಲು ನಾನಾತನನ್ನು ಶೀಘ್ರದಲ್ಲಿ ಮದುವೆಯಾಗಲೇಬೇಕಿದೆ. ಮದುವೆಯಾಗಲು ಅವಕಾಶ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ಕೌಸರ್ ಕೂಡ ಸ್ಥಳೀಯ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಳು.

2005ರಲ್ಲಿ ಪೋರ್ಚುಗಲ್‌ನಿಂದ ಭಾರತಕ್ಕೆ ಹಸ್ತಾಂತರಗೊಂಡಿದ್ದ ಸಲೇಂ ಅಂದಿನಿಂದ ಜೈಲಿನಲ್ಲಿದ್ದಾನೆ. 1993ರರಲ್ಲಿ ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ 257 ಜನ ದುರ್ಮರಣವನ್ನಪ್ಪಿ, 713 ಜನ ಗಾಯಗೊಂಡಿದ್ದರು. ಈ ಕೃತ್ಯದಲ್ಲಿ ಸಲೇಂ ಅಪರಾಧ ಸಾಬೀತಾಗಿದ್ದು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

bombay high court,rejects abu salems,plea

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ