ಭಾರತದಲ್ಲಿ ಪ್ರತಿ 6 ಗಂಟೆಗೊಂದರಂತೆ ಅತ್ಯಾಚಾರ: ಮಧ್ಯಪ್ರದೇಶ ದೇಶದಲ್ಲಿ ನಂ.1, ಉತ್ತರ ಪ್ರದೇಶ 2ನೇ ಸ್ಥಾನ

ನವದೆಹಲಿ:ಆ-7: ದೇಶದಲ್ಲಿ ಪ್ರತಿ 6 ಗಂಟೆಗೊಂದರಂತೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.

ಎನ್ ಸಿಆರ್ ಬಿ(National Crime Records Bureau) ಡಾಟಾದ ಪ್ರಕಾರ ಪ್ರತಿ 6 ಗಂಟೆಗೆ ಓರ್ವ ಯುವತಿ ಅತ್ಯಾಚಾರಕ್ಕೊಳಗಾಗುತ್ತಿದ್ದಾಳೆ. 38,000 ಅತ್ಯಾಚಾರ ಪ್ರಕರಣಗಳು ನಡೆದಿವೆ. ಅತ್ಯಾಚಾರ ಪ್ರಕರಣಗಳಲ್ಲಿ ಮಧ್ಯಪ್ರದೇಶ ದೇಶದಲ್ಲೇ ನಂ.1 ಆಗಿದ್ದು ಉತ್ತರ ಪ್ರದೇಶ 2 ನೇ ಸ್ಥಾನದಲ್ಲಿದೆ, ನಮ್ಮ ದೇಶದಲ್ಲಿ ಏನಾಗುತ್ತಿದೆ. ಅಧಿಕಾರಿಗಳು ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲವೇಕೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಮುಜಾಫರ್ ಪುರದ ಶೆಲ್ಟರ್ ಹೌಸ್ ನಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಿರುವ ವೇಳೆಯಲ್ಲಿ ಸುಪ್ರೀಂ ಕೋರ್ಟ್ ಎನ್ ಸಿಆರ್ ಬಿ ಅಂಕಿ-ಅಂಶಗಳನ್ನು ಉಲ್ಲೇಖಿಸಿದ್ದು, ಶೆಲ್ಟರ್ ಹೌಸ್ ಗಳನ್ನು ನಿರ್ವಹಣೆ ಮಾಡುತ್ತಿದ್ದ ಎನ್ ಜಿಒಗೆ ಬಿಹಾರ ಸರ್ಕಾರ ಅನುದಾನ ನೀಡುತ್ತಿತ್ತು. ಆದರೆ ಅಲ್ಲೇನು ನಡೆಯುತ್ತಿದೆ ಎಂಬುದರ ಬಗ್ಗೆ ಮಾಹಿತಿಯೇ ಇರಲಿಲ್ಲ ಇದು ಹೇಗೆ ಸಾಧ್ಯ? ನೀವು ಅಲ್ಲಿ ತನಿಖೆ ಮಾಡುವುದರ ಬಗ್ಗೆ ಯೋಚಿಸಲಿಲ್ಲವೇ ಎಂದು ಸುಪ್ರೀಂ ಕೋರ್ಟ್ ನಿತೀಶ್ ಕುಮಾರ್ ಸರ್ಕಾರವನ್ನು ಪ್ರಶ್ನಿಸಿದೆ.

ಮುಜಫರ್ ಪುರದ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್ ಕೇಳಿದೆ.

Muzaffarpur shelter home rapes,Supreme Court pulls up Bihar govt,NCRB data,every six hours, a woman is raped in India

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ