ತಮೀಳು ನಾಡಿನ ಸೂರ್ಯ ಅಸ್ತಂಗತ

 

ಸಂಜೆ 6:10 ಕ್ಕೆ ಇಹಲೋಕ ಯಾತ್ರೆ‌ ಮುಗಿಸಿದ‌ ಮುತ್ತು ವೇಲು ಕರುಣಾ‌ನಿಧಿ. ದ್ರಾವಿಡ ಚಳುವಳಿಯಿಂದಲೇ ಅನಭಿಷಿಕ್ತ, ಸಾಮ್ರಾಟನಾಗಿ, ರಾಜ್ಯದ ಮುಖ್ಯಸ್ಥನಾಗಿ, ಮಾಧ್ಯಮಗಳ ದೊರೆಯಾಗಿಯೂ ಬಹುಮುಖಿ ನಾಯಕನಾಗಿದ್ದ, ತಮಿಳು ನಾಡಿನ‌ ಮಾಜಿ ಮುಖ್ಯಮಂತ್ರಿ ದಕ್ಷಿಣ ಮೂರ್ತಿ ಮುತ್ತುವೇಲು ಕರುಣಾನಿಧಿ ಇಂದು ಸಂಜೆ 6:10 ಕ್ಕೆ ಚನೈನ ಕಾವೇರಿ ಆಸ್ಪತ್ರೆಯಲ್ಲಿ ವಿಧಿವಶರಾದರು. ದ್ರಾವಿಡ ಚಳುವಳಿಯಿಂದ ಮುಖ್ಯವಾಹಿಣಿಗೆ ಬಂದ ಕರುಣಾನಿಧಿ ಅವರು ತಲೈವಿ ಎಂದೇ ಖ್ಯಾತಿ ಪಡೆದಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಸರಿಸಮನಾಗಿ ಪ್ರಸಿದ್ಧಿ ಹೊಂದಿದ್ದರು. ಕರುಣಾನಿಧಿ ನಿಧನದಿಂದ ದ್ರಾವಿಡ ಚಳುವಳಿಗೆ ಸದ್ಯ ಹಿನ್ನಡೆ ಉಂಟಾಗಿದೆ. ಕರುಣಾನಿಧಿ ಅವರು, ಪುತ್ರರಾದ ಸ್ಟಾಲಿನ್,‌ ತಮಿಳರಸನ್ ಹಾಗೂ ಪುತ್ರಿಯರಾದ ಸೆಲ್ವಿ, ಕನಿಮೋಳಿ ಅವರನ್ನ ಅಗಲಿದ್ದಾರೆ. ಮುತ್ತು ವೇಲು ಕರುಣಾನಿಧಿ ಅವರ ನಿಧನದಿಂದ ಇಡೀ ತಮಿಳುನಾಡು ಶೋಕದಲ್ಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ