ನವದೆಹಲಿ:ಆ-6: ಆಗಸ್ಟ್ 9 ರಂದು ರಾಜ್ಯಸಭೆ ಉಪ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸುವುದಾಗಿ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಈ ಕುರಿತು ಘೋಷಣೆ ಮಾಡಿರುವ ಉಪ ರಾಷ್ಟ್ರಪತಿ ನಾಯ್ಡು ಅವರು, ಸಂಸತ್ತಿನಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನ ಕೊನೆಯ ಎರಡನೇ ದಿನದಂದು ಚುನಾವಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಪಿ.ಜೆ. ಕುರಿಯನ್ ಅವರು ರಾಜ್ಯಸಭೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದರು. ರಾಜ್ಯಸಭೆ ಸಾಕಷ್ಟು ಕೆಲಸವನ್ನು ಅವರೇ ಮಾಡುತ್ತಿದ್ದರು. ಕುರಿಯನ್ ಅವರು ಬಹುಮುಖ ವ್ಯಕ್ತಿತ್ವವನ್ನು ಹೊಂದಿದ್ದರು. ರಾಜ್ಯಸಭೆಯಲ್ಲಿ ಕಲಾಪಗಳು ಸುಗಮವಾಗಿ ಸಾಗುವಂತೆ ಮಾಡುತ್ತಿದ್ದರು. ನನ್ನ ಗಮನ ಸೆಳೆದ ವ್ಯಕ್ತಿಯಾಗಿದ್ದರು. ಮುಂಬರುವ ದಿನಗಳಲ್ಲಿ ಆಡಳಿತಾರೂಢ ಪಕ್ಷ ಹಾಗೂ ವಿರೋಧ ಪಕ್ಷಗಳು ಕುರಿಯನ್ ರಂತಹ ಸೂಕ್ತ ವ್ಯಕ್ತಿಯನ್ನೇ ಉಪ ಸಭಾಪತಿಯಾಗಿ ಆಯ್ಕೆ ಮಾಡಲಿವೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಪಿಜೆ. ಕುರಿಯನ್ ಅವರು ಜು.1 ರಂದು ರಾಜ್ಯಸಭಾ ಉಪ ಸಭಾಪತಿ ಸ್ಥಾನದಿಂದ ನಿವೃತ್ತಿ ಪಡೆದುಕೊಂಡಿದ್ದರು.
Rajya Sabha,Deputy Chairman Election,August 9th