ನವದೆಹಲಿ: ಸರ್ಕಾರಿ ಸೌಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಸೇರಿದಂತೆ ಹಲವು ಬ್ಯಾಂಕ್ ಗಳು ಖಾತೆಯಲ್ಲಿ ಕನಿಷ್ಠ ಬಾಕಿ(ಮಿನಿಮಮ್ ಬ್ಯಾಲೆನ್ಸ್) ಉಳಿಸಿಕೊಳ್ಳದ ಗ್ರಾಹಕರಿಗೆ ದಂಡ ವಿಧಿಸುತ್ತಿದ್ದು 2017-18ನೇ ಸಾಲಿನಲ್ಲಿ ದಂಡ ರೂಪವಾಗಿ ಬ್ಯಾಂಕ್ ಗಳು ಬರೋಬ್ಬರಿ 5 ಸಾವಿರ ಕೋಟಿ ರುಪಾಯಿಯನ್ನು ಸಂಗ್ರಹಿಸಿದೆ.
ಜನ್ ಧನ್ ಯೋಜನೆ ಅಡಿ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳದ ಗ್ರಾಹಕರ ಖಾತೆಗಳಲ್ಲೂ ಆರಂಭಿಕ ಉಳಿತಾಯದ ಮೊತ್ತವೇ 30.8 ಕೋಟಿ ರುಪಾಯಿಗಳಷ್ಟಿತ್ತು. ಹಾಗಿದ್ದರೂ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಗ್ರಾಹಕರಿಂದ ವಸೂಲಾದ ದಂಡದ ಪ್ರಮಾಣ ಏರಿಕೆಯಾಗಿದೆ. ಹೀಗಿದ್ದರು ಸುಮಾರು 5 ಸಾವಿರ ಕೋಟಿ ರುಪಾಯಿ ಸಂಗ್ರಹವಾಗಿದೆ. ಇದರಲ್ಲಿ 2,433 ಕೋಟಿ ರುಪಾಯಿಯನ್ನು ಎಸ್ಬಿಐ ಸಂಗ್ರಹಿಸಿದೆ.
ಇನ್ನುಳಿದಂತೆ ಆಕ್ಸಿಸ್ ಬ್ಯಾಂಕ್, ಹೆಚ್ ಡಿಎಫ್ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಗಳು ದಂಡ ರೂಪವಾಗಿ ಹಣ ಸಂಗ್ರಹಿಸಿದೆ. 2018ರ ಹಣಕಾಸು ವರ್ಷದಲ್ಲಿ ಕೆಲ ಬ್ಯಾಂಕ್ ಗಳು ಕನಿಷ್ಠ ಬಾಕಿ ದಂಡವನ್ನು ಸ್ವಲ್ಪ ಕಡಿತಗೊಳಿಸಿದ್ದವು. ಇದರಿಂದಾಗಿ ಎಸ್ಬಿಐ ಈ ಏಳು ತಿಂಗಳಲ್ಲಿ 1,700 ಕೋಟಿ ರುಪಾಯಿ ಸಂಗ್ರಹಿಸಿದೆ.