ಬೆಂಗಳೂರು, ಆ.5- ಸಮಾಜಮುಖಿ ಕ್ಷೇತ್ರ ಆಯ್ಕೆ ಮಾಡಿಕೊಂಡು ದೇಶದ ಪ್ರಗತಿಯಲ್ಲಿ ಭಾಗಿಯಾಗುವಂತೆ ಎಸ್‍ಎಲ್‍ಆರ್‍ನ ಹಿರಿಯ ವ್ಯವಸ್ಥಾಪಕ ಮುರುಳಿ ಕೃಷ್ಣ ಕರೆ ನೀಡಿದರು.
ಕೆಆರ್‍ಪುರದ ಸಿಲಿಕಾನ್ ಸಿಟಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಅತ್ಯಮುಲ್ಯವಾದದ್ದು, ಆದ್ದರಿಂದ ಮುಂದಿನ ಆಯ್ಕೆ ನಿಮ್ಮ ಜೀವನ ಉತ್ತಮ ರೀತಿಯಲ್ಲಿರುವಂತೆ ನೋಡಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಪುಸ್ತಕದಲ್ಲಿ, ಕಾಲೇಜಿನಲ್ಲಿ ಹೇಳಿಕೊಟ್ಟ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಂಡು ಗುರು-ಹಿರಿಯರಿಗೆ ಗೌರವ ನೀಡಿ. ಆಯ್ಕೆಮಾಡಿಕೊಂಡ ಕ್ಷೇತ್ರದಲ್ಲಿ ನಿಷ್ಟೆಯಿಂದ ಕಾರ್ಯ ನಿರ್ವಹಿಸಿ ದೇಶಕ್ಕೆ ಕಾಲೇಜಿಗೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದ ಅವರು, ಹೆಚ್ಚು ಶ್ರಮದ ಜತೆಗೆ ಚಾಣಾಕ್ಷತನದ ಬುದ್ಧಿ ಕಲಿತು ಜೀವನ ರೂಪಿಸಿಕೊಳ್ಳಿ ಎಂದರು.
ಸಿಲಿಕಾನ್ ಸಿಟಿ ಕಾಲೇಜಿನ ಅಧ್ಯಕ್ಷ ಡಾ.ಹೆಚ್.ಎಂ.ಚಂದ್ರಶೇಖರ್ ಮಾತನಾಡಿ, ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಬಡವರಿಗೆ ಉಚಿತವಾಗಿ ವಿದ್ಯೆ ನೀಡುವ ಕೆಲಸ ನಮ್ಮ ವಿದ್ಯಾರ್ಥಿಗಳು ಮಾಡಬೇಕು ಎಂದು ಹೇಳಿದರು.
ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಬೆಳೆದಂತೆ ಹಾದಿ ಮರೆಯಬಾರದು ಹಾಗೂ ಗುರುಹಿರಿಯರನ್ನು ಗೌರವಿಸಬೇಕು ಎಂದು ತಿಳಿಹೇಳಿದರು.
ಸಮಾಜದ ಅಭಿವೃದ್ಧಿಗೆ ಉತ್ತಮ ವಿದ್ಯಾರ್ಥಿಗಳನ್ನು ತಯಾರಿ ಮಾಡವ ಕೆಲಸ ನಮ್ಮ ಕಾಲೇಜು ಮಾಡುತ್ತಿದೆ ಎಂದು ಹೇಳಿದರು.
ಸಮಾಜದಲ್ಲಿ ನಡೆಯುವ ಆಗುಹೋಗುಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಎಲ್ಲಾ ರಂಗಗಳಲ್ಲೂ ಭಾಗಿಯಾಗುವಂತೆ ಪೆÇ್ರೀ ಕ್ರೀಡೆ-ಸಾಂಸ್ಕøತಿಕ ಚಟುವಟಿಕೆಗಳು ಹಾಗೂ ವಿದ್ಯಾಭ್ಯಾಸ ಈ ಎಲ್ಲವನ್ನೂ ಸಮನಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಧೂಮಪಾನ ಮಾಡದಂತೆ ವಿದ್ಯಾರ್ಥಿಗಳಲ್ಲಿ ಪ್ರಮಾಣ ವಚನ ಮಾಡಿಸಲಾಯಿತು.
ಸಂಶೋಧನಾ ನಿರ್ದೇಶಕರಾದ ರೋಸ್‍ಕವಿತ, ಪ್ರಾಂಶುಪಾಲರಾದ ಜ್ಞಾನೇಶ್, ಆದಿಲಕ್ಷ್ಮಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.