
ಬೆಂಗಳೂರು,ಆ.5- ಜನರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ನಂದಿನಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಬಡ ಮತ್ತು ಮಧ್ಯಮ ವರ್ಗದವರಗೆ ನೆರವಾಗುತ್ತಿದೆ ಎಂದು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಯ್ಯ ಹೇಳಿದರು.
ನಂದಿನಿ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಸೊಸೈಟಿಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಂಸ್ಥೆ ಪ್ರಾರಂಭದಲ್ಲಿ ಕೇವಲ ಐದು ಸಾವಿರ ಸಾಲ ಮಾತ್ರ ನೀಡುತ್ತಿತ್ತು. ಇಂದು ಈ ಬ್ಯಾಂಕ್‍ನ ವ್ಯವಹಾರ ಸಾಕಷ್ಟು ಮುಂದುವರೆದಿದ್ದು, 25 ಕೋಟಿ ರೂ. ಹೆಚ್ಚು ಆದಾಯ ಗಳಿಸಿದೆ ಎಂದು ತಿಳಿಸಿದರು.
ಈ ಸೊಸೈಟಿ ಸಮಾಜದ ಜನರ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜನರಿಗೆ ಈ ಸಂಸ್ಥೆಯ ಅವಶ್ಯಕತೆ ಇದೆ. ಜನರು ಜೀನವೋಪಾಯಕ್ಕಾಗಿ ನಡೆಸುವ ವ್ಯಾಪಾರ, ಉದ್ದಿಮೆ ಸೇರಿದಂತೆ ಮನೆ ಕಟ್ಟಿಕೊಳ್ಳಲು ಸಹ ಸಾಲಸೌಲಭ್ಯ ಒದಗಿಸಿ ಸಹಾಯಸ್ತ ನೀಡುತ್ತಿದೆ. ಇದರ ಸದುಪಯೋಗ ಪಡೆಯುವವರು ಸಾಲ ಮರುಪಾವತಿಸುವ ಮೂಲಕ ಮತ್ತಷ್ಟು ಜನರಿಗೆ ಈ ಸೌಲಭ್ಯ ದೊರೆಯುವಂತೆ ಮಾಡಿ ಎಂದರು.
ಸಚಿವ ಬಂಡೆಪ್ಪ ಕಾಶ್ಯಂಪುರ್ ಮಾತನಾಡಿ, ಈ ಸಂಸ್ಥೆಯು ಮತ್ತಷ್ಟು ಎತ್ತರಕ್ಕೆ ಬೆಳೆಯಲ್ಲಿ. ಬಡವರಿಗೆ ಮತ್ತಷ್ಟು ನೆರವಾಗಲಿ ಎಂದು ಹಾರೈಸೋಣ ಎಂದರು.
ಇದೇ ಸಂದರ್ಭದಲ್ಲಿ ಶಾಸಕರು ಹಸು ಮತ್ತು ಕರು ವಿಗ್ರಹ ಬಿಡುಗಡೆ ಮಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಆದಿಚುಂಚನಗಿರಿ ಮಹಾಸಂಸ್ಥಾಣಧ ಶ್ರೀ ಸೌಮ್ಯನಾಥ ಸ್ವಾಮೀಜಿ ಉದ್ಘಾಟಿಸಿದರು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಇದ್ದರು.
ರಜತ ಮಹೋತ್ಸವದ ಬೆಳ್ಳಿ ನಾಣ್ಯವನ್ನು ಸದಾನಂದಗೌಡರು, ಠೇವಣ ಪತ್ರ, ಬಂಡೆಪ್ಪ ಕಾಶ್ಯಂಪುರ್ ಅವರು ಕಾಮಧೇನು ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ 2017-18ನೇ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.