
ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ ನಲ್ಲಿ ಭಾರತದ ಪಿ.ವಿ ಸಿಂಧು ಜಪಾನ್ ನ ನೋಜೊಮಿ ಒಕುಹರಾ ಅವರನ್ನು ಮಣಿಸಿ ಸೆಮಿ ಫೈನಲ್ಸ್ ಪ್ರವೇಶಿಸಿದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಸೆಮಿ ಫೈನಲ್ಸ್ ನಲ್ಲೂ ಜಯಗಳಿಸಿದ್ದು ಫೈನಲ್ಸ್ ಪ್ರವೇಶಿಸಿದ್ದಾರೆ.
ಆ.04 ರಂದು ನಡೆದ ಪಂದ್ಯದಲ್ಲಿ ಪಿವಿ ಸಿಂಧು ತಮ್ಮ ಎದುರಾಳಿ, ವಿಶ್ವದ ಮೂರನೇ ಆಟಗಾರ್ತಿಯಾಗಿರುವ ಜಪಾನ್ ನ ಅಕಾನೆ ಯಮಾಗುಚಿ ಅವರನ್ನು 21-16, 24-22 ಅಂತರದಿಂದ ಮಣಿಸಿದ್ದು, ಮೊದಲ ಹಂತದಲ್ಲಿ 21-16 ಅಂತರದಿಂದ ಗೆದ್ದ ಸಿಂಧು, ಎರಡನೇ ಹಂತದಲ್ಲಿ ಯಮಾಗುಚಿ ವಿರುದ್ಧ ಸ್ವಲ್ಪ ಮಂಕಾದರು ಆದರೆ ಮತ್ತೆ ಪುಟಿದೆದ್ದ ಸಿಂಧು ಸುಲಭವಾಗಿ ಜಯ ಗಳಿಸಿ ಫೈನಲ್ಸ್ ಪ್ರವೇಶಿಸಿದ್ದಾರೆ.
ಕ್ರೋಷಿಯಾದ ಮರಿನ್ ಸಿಲಿಕ್ ಅವರನ್ನು ಸಿಂಧು ಫೈನಲ್ಸ್ ನಲ್ಲಿ ಎದುರಿಸಲಿದ್ದಾರೆ. ಆ.03 ರಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 21-17, 21-19 ಸೆಟ್ ಗಳ ಅಂತರದಿಂದ ಸಿಂಧು ನೋಜೊಮಿ ಒಕುಹರಾ ಅವರನ್ನು ಮಣಿಸಿ ಸೆಮಿ ಫೈನಲ್ಸ್ ಪ್ರವೇಶಿಸಿದ್ದರು.