ಮೈಸೂರು ಅರಮನೆಯಲ್ಲಿ ನಟಿ ನಿಧಿ ಸುಬ್ಬಯ್ಯ ಫೋಟೋ ಶೂಟ್ ವಿವಾದ!

ಮೈಸೂರು: ಸ್ಯಾಂಡಲ್ವುಡ್ ನಟಿ ನಿಧಿ ಸುಬ್ಬಯ್ಯ ಅವರು ಇತ್ತೀಚೆಗೆ ಮೈಸೂರಿನ ಅರಮನೆಗೆ ಭೇಟಿ ನೀಡಿದ್ದು ಈ ವೇಳೆ ದರ್ಬಾರ್ ಹಾಲ್ ನಲ್ಲಿ ಫೋಟೋ ಶೂಟ್ ನಡೆಸಿ ವಿವಾದಕ್ಕೆ ಗುರಿಯಾಗಿದ್ದಾರೆ.
ಮೈಸೂರು ಅರಮನೆಯಲ್ಲಿ ಫೋಟೋ ಶೂಟ್ ಮಾಡುವುದಕ್ಕೆ ನಿಷೇಧವಿದೆ. ನಿಧಿ ಸುಬ್ಬಯ್ಯ ಅರಮನೆಯಲ್ಲಿ ತೆಗೆದಿದ್ದ ಫೋಟೋವನ್ನು ಇನ್ ಸ್ಟಾಗ್ರಾಮ್ನಲ್ಲಿ ಅಪ್ ಲೋಡ್ ಮಾಡಿದ್ದರು. ಇದನ್ನು ಕಂಡ ಕೆಲ ಅಭಿಮಾನಿಗಳು ಪ್ಯಾಲೇಸ್ ನಲ್ಲಿ ಫೋಟೋ ತೆಗೆಸಿಕೊಳ್ಳಲು ನಟಿಗೆ ಅನುಮತಿ ಹೇಗೆ ಸಿಕ್ಕಿತು ಎನ್ನುವ ಪ್ರಶ್ನೆಯನ್ನು ಎತ್ತಿದ್ದಾರೆ. ಏಕೆಂದರೆ ಈ ಹಿಂದೆ ಜೋಡಿಯೊಂದು ಪ್ರಿ ವೆಡ್ಡಿಂಗ್ ಫೋಟೋ ಶೂಟ್ ನಡೆಸಿತ್ತು. ನಿಷೇಧಿತ ಪ್ರದೇಶದಲ್ಲಿ ಫೋಟೋ ತೆಗೆಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು.
ಇನ್ನು ಪ್ಯಾಲೇಸ್ ನಲ್ಲಿ ಫೋಟೋ ಶೂಟ್ ಮಾಡುವ ಕುರಿತಂತೆ ಪ್ರತಿಕ್ರಿಯಿಸಿರುವ ಭದ್ರತೆಯ ಎಸಿಪಿ ಶೈಲೇಂದ್ರ ಅವರು ಸ್ಪಷ್ಟನೆ ನೀಡಿದ್ದು ಅರಮನೆಯಲ್ಲಿ ಫೋಟೋಗೆ ನಿಷೇಧವಿಲ್ಲ. ಆದರೆ ನವರಾತ್ರಿ ಸಂದರ್ಭದಲ್ಲಿ ಚಿನ್ನದ ಸಿಂಹಾಸನ ಹಾಗೂ ಅಂಬಾರಿ ಇಡುವ ಕೆಲವು ಪ್ರದೇಶಗಳಲ್ಲಿ ಮಾತ್ರ ಫೋಟೋ ತೆಗೆಯುವಂತಿಲ್ಲ ಎಂದು ತಿಳಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ