ಏರೋ ಇಂಡಿಯಾ ಪ್ರದರ್ಶನಕ್ಕೆ ಸೂಕ್ತ ಸಮಯದಲ್ಲಿ ನಿರ್ಧಾರ: ಕೇಂದ್ರ ಸಚಿವೆ ನಿರ್ಮಲಾಸೀತರಾಮನ್

 

ಬೆಂಗಳೂರು, ಆ.4- ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪ್ರತಿಷ್ಠಿತ ಏರೋ ಇಂಡಿಯಾವನ್ನು ನಡೆಸಲು ಹಲವಾರು ರಾಜ್ಯಗಳು ಮುಂದೆ ಬಂದಿದ್ದು, ಬೆಂಗಳೂರಿನಲ್ಲಿ ಮುಂದುವರೆಸಬೇಕೇ ಅಥವಾ ಬೇರೆ ರಾಜ್ಯಗಳಿಗೆ ಅವಕಾಶ ನೀಡಬೇಕೆ ಎಂಬುದರ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳುವುದಾಗಿ ಕೇಂದ್ರ ಸಚಿವರಾದ ನಿರ್ಮಲಾಸೀತರಾಮನ್ ಹೇಳಿದರು.

ವಿಧಾನಸೌಧದ ಸ್ಮಮೇಳನ ಸಭಾಂಗಣದಲ್ಲಿಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಪಂದಿಗೆ ಜಂಟಿ ಪತ್ರಿಗಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏರೋ ಇಂಡಿಯಾ ಪ್ರದರ್ಶನದ ಸ್ಥಳ ಮತ್ತು ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ. ಸೂಕ್ತ ಸಮಯದಲ್ಲಿ ಈ ಬಗ್ಗೆ ನಿರ್ಧಾರತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಈ ಮೊದಲು ರಕ್ಷಣಾ ಇಲಾಖೆಯ ವಸ್ತು ಪ್ರದರ್ಶನವನ್ನು ದೆಹಲಿಯಲ್ಲಿ 10 ಬಾರಿ, ಗೋವಾ ಮತ್ತು ತಮಿಳುನಾಡಿಯಲ್ಲೂ ನಡೆಸಲಾಗಿತ್ತು. ಅದೇ ರೀತಿ ಬೆಂಗಳೂರಿನಲ್ಲಿ ಹಲವಾರು ವರ್ಷಗಳಿಂದ ಏರೋ ಇಂಡಿಯಾ ವೈಮಾನಿಕ ನಡೆಸಿಕೊಂಡು ಬರಲಾಗಿದೆ. ಈ ಬಾರಿ ಬೇರೆ ಬೇರೆ ರಾಜ್ಯಗಳು ನಮ್ಮಲ್ಲಿ ಏರೋ ಇಂಡಿಯಾ ನಡೆಸಿ ಎಂದು ಮನವಿ ಮಾಡಿವೆ. ಸದ್ಯಕ್ಕೆ ಯಾವುದೇ ನಿರ್ಧಾರವನ್ನು ರಕ್ಷಣಾ ಇಲಾಖೆ ತೆಗೆದುಕೊಂಡಿಲ್ಲ. ಶೀಘ್ರವೇ ಎಲ್ಲವನ್ನೂ ಅಧಿಕೃತವಾಗಿ ಪ್ರಕಟಿಸುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮ ಅವರು ಮಾತನಾಡಿ, ಏರೋ ಇಂಡಿಯಾವನ್ನು ಬೆಂಗಳೂರಿನಲ್ಲೇ ಮುಂದುವರೆಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇವೆ. ಅವರೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಲವಾರು ರಾಜ್ಯಗಳಿಂದ ಬೇಡಿಕೆ ಬಂದಿದ್ದರೂ ರಾಜ್ಯದಲ್ಲಿ ಉತ್ತಮ ವಾತಾವರಣವಿದೆ. ಅಗತ್ಯ ಮೂಲಸೌಕರ್ಯವಿದೆ. ಹೀಗಾಗಿ ಏರೋ ಇಂಡಿಯಾವನ್ನು ಬೆಂಗಳೂರಿನಲ್ಲೇ ಮುಂದುವರೆಸಬೇಕೆಂದು ಮನವಿ ಮಾಡಿದ್ದೇವೆ. ಕೇಂದ್ರ ಸಚಿವರೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಏರೋ ಇಂಡಿಯಾ ವಿಶ್ವ ಪ್ರಸಿದ್ಧಿಯಾಗಿದ್ದು, ಲಕ್ಷಾಂತರ ಜನರ ಮನಸೂರೆಗೊಂಡಿದೆ. ಗಗನದಲ್ಲಿ ಲೋಹದ ಹಕ್ಕಿಗಳ ಕಲರವ ನೋಡಲು ದೇಶದಿಂದ ಅಷ್ಟೇ ಅಲ್ಲದೆ ವಿದೇಶಗಳಿಂದಲೂ ಪ್ರವಾಸಿಗರು ಹರಿದು ಬರುತ್ತಿದ್ದರು. ಈಗ ಅದನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂಬ ಚರ್ಚೆಗಳು ಆರಂಭವಾಗಿವೆ. ಕಳೆದ ಬಾರಿ ಗೋವಾದಿಂದ ಕೇಂದ್ರ ರಕ್ಷಣಾ ಸಚಿವರಾಗಿದ್ದ ಮನೋಹರ್ ಪಾರಿಕ್ಕರ್ 2018ರ ಏರೋ ಇಂಡಿಯಾವನ್ನು ಗೋವಾಕ್ಕೆ ಸ್ಥಳಾಂತರಿಸುವ ಕುರಿತು ಚರ್ಚೆ ಮಾಡಿದ್ದರು. ಆದರೆ, ಅಂತಿಮ ಹಂತದಲ್ಲಿ ಮತ್ತೆ ಬೆಂಗಳೂರಿನಲ್ಲೇ ಏರೋ ಇಂಡಿಯಾ ಪ್ರದರ್ಶನ ನಡೆದಿತ್ತು.
ಈ ಬಾರಿ ನಿರ್ಮಲಾ ಸೀತಾರಾಮನ್ ತಮಿಳುನಾಡಿನಿಂದ ಕೇಂದ್ರ ಸಚಿವರಗಿದ್ದು, ಮತ್ತೊಮ್ಮೆ ಏರೋ ಇಂಡಿಯಾ ಸ್ಥಳಾಂತರದ ಬಗ್ಗೆ ಚರ್ಚೆಯಾಗಿದೆ. ನಿರ್ಮಲಾಸೀತಾರಾಮ್ ಅವರು ಕರ್ನಾಟಕದಿಂದಲೇ ರಾಜ್ಯಸಭಾ ಸದಸ್ಯರಾಗಿ ಅನಂತರ ಕೇಂದ್ರ ಸಚಿವರಾಗಿದ್ದಾರೆ. 2019ರ ಪ್ರದರ್ಶನವನ್ನು ಬೆಂಗಳೂರಿನಲ್ಲೇ ಮುಂದುವರೆಸಬೇಕೆಂಬ ಬೇಡಿಕೆಗಳು ಕೇಳಿ ಬಂದಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ