ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಸೆಮಿಫೈನಲ್‌ ಪ್ರವೇಶಿಸಿದ ಪಿ.ವಿ ಸಿಂಧೂ

ನಾಂಜಿಂಗ್‌ :ಆ-4: ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಆಟಗಾರ್ತಿ ಪಿ.ವಿ. ಸಿಂಧೂ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.

ಪಿವಿ ಸಿಂಧೂ ಜಪಾನಿನ ನಜೋಮಿ ಒಕುಹರಾ ವಿರುದ್ಧ ಅದ್ಭುತ ಆಟ ಪ್ರದರ್ಶಿಸಿ 21-17, 21-19 ಅಂತರದ ರೋಮಾಂಚಕಕಾರಿ ಗೆಲುವನ್ನು ಸಾಧಿಸಿದ್ದಾರೆ. ಈ ಮೂಲಕ ಭಾರತಕ್ಕೆ ಪದಕ ನಿರೀಕ್ಷೆ ಪಕ್ಕಾ ಆಗಿದೆ.

ನಿನ್ನೆಯ ಪಂದ್ಯಗಳಲ್ಲಿ ಸೈನಾ ನೆಹ್ವಾಲ್‌, ಅಶ್ವಿ‌ನಿ ಪೊನ್ನಪ್ಪ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ, ಬಿ. ಸಾಯಿ ಪ್ರಣೀತ್‌ ಸೋಲನಭವಿಸುವ ಮೂಲಕ ಟೂರ್ನಿಯಿಂದ ನಿಗರ್ಮಿಸಿದ್ದರು.

ವಿಶ್ವ ಬ್ಯಾಡ್ಮಿಂಟನ್‌ ಕೂಟದಲ್ಲಿ ಪಿ.ವಿ. ಸಿಂದೂ 2013, 2014ರಲ್ಲಿ ಕಂಚಿನ ಪದಕ, 2017ರಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇಂದಿನ ಸೆಮಿಫೈನಲ್‌ನಲ್ಲಿ ಅವರು ಜಪಾನಿನ ಅಕಾನೆ ಯಮಾಗುಚಿ ವಿರುದ್ಧ ಸೆಣಸಾಡಲಿದ್ದಾರೆ.

Badminton World Championships,PV Sindhu,semi-final

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ