
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಭಾಗದಲ್ಲಿ ಅಟ್ಟಹಾಸದಿಂದ ಮರೆಯುತ್ತಿರುವ ಉಗ್ರರ ಹುಟ್ಟಡಗಿಸಲು ಪಟ ತೊಟ್ಟಿರುವ ಭಾರತೀಯ ಸೇನೆ ಇಂದು ಬೆಳಗಿನ ಜಾವ ಐದು ಮಂದಿ ಉಗ್ರರನ್ನು ಹೊಡೆದುರುಳಿಸಿದೆ.
ಕಳೆದ ಹಲವು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಭದ್ರತಾಪಡೆಯ ಗುಂಡಿನ ದಾಳಿಗೆ ಹಲವು ಉಗ್ರರು ಸಾವನ್ನಪ್ಪಿದ್ದಾರೆ. ಅಂತೆಯೇ ಶಾಪಿಯಾನ್ನಲ್ಲಿ ಶುಕ್ರವಾರದಿಂದ ಆರಂಭವಾದ ಕಾರ್ಯಾಚರಣೆಯಲ್ಲಿ ಇಂದಿನವರೆಗೆ ಐದು ಉಗ್ರರನ್ನು ಕೊಲ್ಲಲಾಗಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ಅವರು ಸ್ಪಷ್ಟಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮುಖ್ಯಸ್ಥ ಎಸ್.ಪಿ. ವೈಡ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು,ಶಾಪಿಯಾನ್ನ ಕಿಲೂರದಲ್ಲಿ ನಡೆದ ಎನ್ಕೌಂಟರ್ನಲ್ಲಿ ನಾಲ್ವರು ಉಗ್ರರ ಮೃತದೇಹ ಕಂಡುಬಂದಿದ್ದು, ಈವರೆಗೆ ಐದು ಉಗ್ರರು ಹತರಾಗಿದ್ದಾರೆ. ಒಳ್ಳೆಯ ಕಾರ್ಯ ಹುಡುಗರೇ ಎಂದು ಶ್ಲಾಘಿಸಿದ್ದಾರೆ.
ಮೃತಪಟ್ಟಿರುವ ಉಗ್ರರ ಗುರುತು ಇನ್ನೂ ಪತ್ತೆಯಾಗಿಲ್ಲ. ಆದರೆ ಇವರು ಲಷ್ಕರ್-ಎ-ತೊಯ್ಬಾಗೆ ಸೇರಿದವರು ಎನ್ನಲಾಗುತ್ತಿದೆ.