ಬೆಂಗಳೂರು, ಆ.4-ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ ಆರಂಭಗೊಂಡಿದ್ದು, ನಗರದ ನಾಲ್ಕು ಕಡೆ ಸರಗಳವು ಮಾಡಿರುವ ಪ್ರಕರಣ ನಡೆದಿದೆ.
ಸಂಜಯನಗರದ ಸುಲೋಚನಾ ಬಾಯಿ ನಿನ್ನೆ ಬೆಳಿಗ್ಗೆ ರಾಘವೇಂದ್ರ ಮಠದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ಅವರ ಕತ್ತಿನಲ್ಲಿದ್ದ 50 ಗ್ರಾಂ ತೂಕದ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಈ ಬಗ್ಗೆ ಸಂಜಯನಗರ ಪೆÇಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.
ಡಿ.ಜಿ.ಹಳ್ಳಿಯಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಚೆಂಗಪ್ಪ ಅವರು 12 ಗ್ರಾಂ ತೂಕದ ಚಿನ್ನದ ಸರ ಕಳೆದುಕೊಂಡಿದ್ದಾರೆ. ನಿನ್ನೆ ಬೆಳಿಗ್ಗೆ 6.50ರ ಸುಮಾರಿಗೆ ಚೆಂಗಪ್ಪ ಅವರು ಎಚ್‍ಬಿಆರ್ 2ನೇ ಹಂತ 3ನೆ ಮುಖ್ಯ ರಸ್ತೆಯಲ್ಲಿ ವಾಯುವಿಹಾರಕ್ಕೆ ಹೋಗುತ್ತಿದ್ದಾಗ ಬೈಕ್‍ನಲ್ಲಿ ಬಂದ ಮೂವರು ಸರ ಕಸಿದು ಪರಾರಿಯಾಗಿದ್ದಾರೆ.
ಬೇಗೂರಿನ ರಾಯಲ್ ಮೆರಿಡಿಯನ್ ಲೇಔಟ್‍ನಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಬೈಕ್‍ನಲ್ಲಿ ಬಂದ ಇಬ್ಬರು, ಅಮುದಾ ಪ್ರಕಾಶ್ ಎಂಬವರ 12 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಈ ಬಗ್ಗೆ ಬೇಗೂರು ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮನೆಯ ಕಿಟಕಿ ಬಳಿ ಮಲಗಿದ್ದ ಹಿರಿಯ ನಾಗರಿಕರೊಬ್ಬರ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ಬಸವೇಶ್ವರನಗರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಮಲ್ಲೇಶ್ವರಂ ಟೈಲರಿಂಗ್ ಸೊಸೈಟಿ ನಿವಾಸಿ ಪುಟ್ಟೇಗೌಡ (55) ಕಳೆದ ರಾತ್ರಿ ಮನೆಯ ಕಿಟಕಿಯ ಬಳಿ ಮಲಗಿದ್ದರು. ಈ ವೇಳೆ ಕಳ್ಳರು ಕಿಟಕಿ ಮೂಲಕ ಕೈ ಹಾಕಿ ಅವರ ಕತ್ತಿನಲ್ಲಿದ್ದ 20 ಗ್ರಾಂ ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾರೆ. ಈ ಬಗ್ಗೆ ಬಸವೇಶ್ವರ ನಗರ ಪೆÇಲೀಸರು ಪ್ರಕರಣ ದಾಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.