33.10 ಲಕ್ಷ ರೂ.ಬೆಲೆಬಾಳುವ 1ಕೆ.ಜಿ.ಗೂ ಅಧಿಕ ಚಿನ್ನಾಭರಣಗಳನ್ನು ವಶ33.10 ಲಕ್ಷ ರೂ.ಬೆಲೆಬಾಳುವ 1ಕೆ.ಜಿ.ಗೂ ಅಧಿಕ ಚಿನ್ನಾಭರಣಗಳನ್ನು ಕಮರ್ಷಿಯಲ್ ಸ್ಟ್ರೀಟ್ ಪೆÇಲೀಸ್ ಠಾಣೆ ಪೆÇಲೀಸರಿಂದ ವಶ

 

ಬೆಂಗಳೂರು, ಆ.4- ಕಾರಿನಲ್ಲಿ ಹೋಗುವ ಹಿರಿಯ ನಾಗರಿಕರನ್ನು ತಡೆದು ನಿಲ್ಲಿಸಿ ಅವರನ್ನು ಬೆದರಿಸಿ ನಗದು, ಚಿನ್ನಾಭರಣ ದೋಚುತ್ತಿದ್ದ ಮೂರು ಮಂದಿ ಕುಖ್ಯಾತ ಸುಲಿಗೆಕೋರರನ್ನು ಬಂಧಿಸಿರುವ ಕಮರ್ಷಿಯಲ್ ಸ್ಟ್ರೀಟ್ ಪೆÇಲೀಸ್ ಠಾಣೆ ಪೆÇಲೀಸರು, 33.10 ಲಕ್ಷ ರೂ.ಬೆಲೆಬಾಳುವ 1ಕೆ.ಜಿ.ಗೂ ಅಧಿಕ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಆರ್.ಟಿ. ನಗರದ ಗಂಗಾನಗರ 4ನೇ ಕ್ರಾಸ್ 5ನೇ ಮೈನ್ ನಿವಾಸಿ ಆಸೀಫ್ ಖಾನ್ (35), ಆರ್.ಟಿ.ನಗರದ ಮಠದಹಳ್ಳಿ 5ನೆ ಕ್ರಾಸ್, 1ನೆ ಮೈನ್ ನಿವಾಸಿ ಮೆಹಬೂಬ್ ಪಾಷ ಹಾಗೂ ಗಂಗಾನಗರದ ಮುನಿರಾಮಣ್ಣ ಬ್ಲಾಕ್‍ನ ಅಲ್ತಾಫ್ ಮುಹಮ್ಮದ್ ಸುಹೇಲ್ (36) ಬಂಧಿತ ಆರೋಪಿಗಳು. ಇವರ ಬಂಧನದಿಂದ ನಗರದ ವಿವಿಧೆಡೆ ನಡೆದಿದ್ದ 30 ಪ್ರಕರಣಗಳು ಪತ್ತೆಯಾಗಿವೆ.
ಆರೋಪಿಗಳು ಜಯನಗರ, ಬಸವನಗುಡಿ, ಸದಾಶಿವನಗರ, ಶೇಷಾದ್ರಿಪುರಂ, ವಿವಿ.ಪುರಂ, ಅಶೋಕನಗರ ಹಾಗೂ ಇತರ ಪೆÇಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಾರಿನಲ್ಲಿ ಒಬ್ಬರೇ ಹೋಗುವ ಹಿರಿಯ ನಾಗರಿಕನ್ನು ಗುರಿಯಾಗಿಸಿಕೊಂಡು ಸುಲಿಗೆ ಮಾಡಿದ್ದರು.
ನನ್ನ ಕಾರಿಗೆ ಡಿಕ್ಕಿ ಹೊಡೆದಿದ್ದೀರಿ ಎಂದು ವಯಸ್ಸಾದ ವ್ಯಕ್ತಿ ಹೋಗುತ್ತಿರುವ ಕಾರನ್ನು ತಡೆದು ಅವರೊಂದಿಗೆ ಜಗಳವಾಡಿ ಚಿನ್ನಾಭರಣ ಮತ್ತು ನಗದನ್ನು ಸುಲಿಗೆ ಮಾಡಿ ಪರಾರಿಯಾಗುತ್ತಿದ್ದರು.
ಈ ಸಂಬಂಧ ಕಾರ್ಯಾಚರಣೆ ನಡೆಸಿದ ಕಮರ್ಷಿಯಲ್ ಸ್ಟ್ರೀಟ್ ಪೆÇಲೀಸರು ಆರೋಪಿಗಳನ್ನು ಬಂಧಿಸಿ, ಅವರಿಂದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 33 ಲಕ್ಷದ 10 ಸಾವಿರದ 500 ರೂ.ಬೆಲೆಬಾಳುವ 1 ಕೆಜಿ 88.5 ಗ್ರಾಂ ತೂಕದ ಚಿನ್ನದ ಒಡವೆಗಳು ಹಾಗೂ 45 ಸಾವಿರ ರೂ. ನಗದು, ಕೃತ್ಯಕ್ಕೆ ಬಳಸಿದ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಬಂಧನದಿಂದ ಕಮರ್ಷಿಯಲ್ ಸ್ಟ್ರೀಟ್ ಪೆÇಲೀಸ್ ಠಾಣೆಯ 1, ಬಸವನಗುಡಿ ಹಾಗೂ ಜಯನಗರ ಠಾಣೆಗಳ 6, ಸದಾಶಿವನಗರದ 4, ವಿವಿ.ಪುರಂ ಠಾಣೆಯ 2. ಶೇಷಾದ್ರಿಪುರಂ ಠಾಣೆಯ 2, ಅಶೋಕನಗರ, ವೈಯಾಲಿಕಾವಲ್, ವಿಧಾನಸೌಧ, ಪುಲಕೇಶಿನಗರ, ಶಂಕರಪುರ, ಎಸ್.ಜೆ.ಪಾರ್ಕ್, ಹೈಗ್ರೌಂಡ್ಸ್, ವಿಲ್ಸನ್ ಗಾರ್ಡನ್ ಹಾಗೂ ಸಿದ್ದಾಪುರ ಪೆÇಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ತಲಾ 1 ಪ್ರಕರಣಗಳು ಸೇರಿ ಒಟ್ಟು 30 ಪ್ರಕರಣಗಳು ಬೆಳಕಿಗೆ ಬಂದಿವೆ.
ಕಮರ್ಷಿಯಲ್ ಸ್ಟ್ರೀಟ್ ಪೆÇಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಹಾಗೂ ಸಿಬ್ಬಂದಿಯ ಈ ಕಾರ್ಯಾಚರಣೆಯನ್ನು ನಗರ ಪೆÇಲೀಸ್ ಆಯುಕ್ತರಾದ ಸುನೀಲ್ ಕುಮಾರ್ ಶ್ಲಾಘಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ