15ರಿಂದ ಕರ್ನಾಟಕ ಪ್ರೀಮಿಯರ್ ಲೀಗ್ ಜಿದ್ದಾ ಜಿದ್ದಿ

ಹುಬ್ಬಳ್ಳಿ: ಕರ್ನಾಟಕ ಸ್ಟೇಟ್ ಕ್ರೀಕೆಟ್ ಅಸೋಶಿಯೇಶನ್ ವತಿಯಿಂದ ಕಾರ್ಬನ್ ಸ್ಮಾರ್ಟಪೋನ್ ಆಯೋಜಿತ ಕೆಪಿಎಲ್ (ಕರ್ನಾಟಕ ಪ್ರೀಮಿಯರ್ ಲೀಗ್) 7ನೇ ಆವೃತ್ತಿಯು ಇದೇ ಆಗಷ್ಟ್ 15ರಿಂದ ಪ್ರಾರಂಭವಾಗಲಿದೆ. ಕೆಪಿಎಲ್ ನ ಬ್ರಾಂಡ್ ಅಂಬಾಸಿಡರ್ ಕನ್ನಡ ಚಿತ್ರನಟಿ ರಾಗಿಣಿ ದ್ವಿವೇದಿ ನೇತೃತ್ವದಲ್ಲಿ ಪ್ರಾರಂಭವಾಗಲಿದೆ ಎಂದು ಕೆಪಿಎಲ್ ಹುಬ್ಬಳ್ಳಿ ವಿಭಾಗದ ಸಹ ಕಾರ್ಯದರ್ಶಿ ಸಂತೋಷ ಮೆನನ್ ತಿಳಿಸಿದರು.

ನಗರದಲ್ಲಿಂದು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತವಾಗಿ ಕೆಪಿಎಲ್ 6 ಆವೃತ್ತಿಗಳು ಉತ್ತಮ ರೀತಿಯಲ್ಲಿ ಅಂತಿಮಗೊಂಡಿದ್ದು, ಏಳನೇ ಆವೃತ್ತಿಯೂ ಕೂಡ ಉತ್ತಮ ರೀತಿಯಲ್ಲಿ ಆಯೋಜಿಸಲಾಗಿದೆ. ಅಲ್ಲದೇ ಆಗಷ್ಟ15ರಂದು ಪ್ರಾರಂಭವಾಗುವ ಕೆಪಿಎಲ್ ಮ್ಯಾಚಗಳು ಬೆಂಗಳೂರಿನಲ್ಲಿ ನಡೆಯುತ್ತವೆ ನಂತರದಲ್ಲಿ ಮೈಸೂರ ಹಾಗು ಹುಬ್ಬಳ್ಳಿಗೆ ವರ್ಗಾವಣೆಯಾಗಲಿವೆ. ಕೆಪಿಎಲ್ ನಲ್ಲಿ ಶಿವಮೊಗ್ಗ ,ಮೈಸೂರ, ದಾವಣಗೆರೆ, ಹುಬ್ಬಳ್ಳಿ ಸೇರಿದಂತೆ ಕರ್ನಾಟಕದ ಕ್ರಿಕೆಟ್ ಟೀಮಗಳು ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಸೈಕಲ್ ಪ್ಯೂರ್ ಅಗರಬತ್ತಿ, ವಿಜಯಕರ್ನಾಟಕ, ವಿಮಲ್ ಪಾನಮಸಾಲ, ಹಾಟಸ್ಟಾರ್, ಪಾಸ್ಟ್ ಟ್ರ್ಯಾಕ್ ಕಂಪನಿಗಳ ಸಹಯೋಗದಲ್ಲಿ ಜರುಗಲಿದೆ. ಸ್ಥಳೀಯ ಟೊರ್ನಾಮೆಂಟ್ ಆಗಿ ಪ್ರಾರಂಭವಾಗಿದ್ದ ಕೆಪಿಎಲ್ ಈಗ ಸಮಾಜಿಕ ಜಾಲತಾಣಗಳ ಮೂಲಕ 3.15 ಮಿಲಿಯನ್ ಜನರನ್ನು, ಪೇಸ್ ಬುಕ್ ಮೂಲಕ 1,57,02,582 ಪಾಲೋವರ್ಸನ್ನು ಹೊಂದಿರುವುದು ಕೆಪಿಎಲ್ ಸಾಧನೆ ಎಂದು ಹೇಳಬಹುದು. ಅಲ್ಲದೇ ಕನಿಷ್ಠ 16 ವರ್ಷದ ಆಟಗಾರರು ಕ್ರಿಕಟನಲ್ಲಿ ಆಡಲಿದ್ದಾರೆ ಎಂದರು.

ಬಳಿಕ ಮಾತನಾಡಿದ ಕೆಪಿಎಲ್ ಬ್ರಾಂಡ್ ಅಂಬಾಸಿಡರ್ ರಾಗಿಣಿ ದ್ವಿವೇದಿ, ಕ್ರಿಕೇಟ್ ಎಂಬುವುದು ಎಲ್ಲರನ್ನೂ ಆಕರ್ಷಿಸುವ ಆಟವಾಗಿದೆ. ಅಲ್ಲದೇ ಸಿಸಿಎಲ್, ಐಪಿಎಲ್, ಕೆಪಿಎಲ್ ಕೂಡ ಒಂದು ಉತ್ತಮ ಮಟ್ಟದ ಕ್ರೀಡಾ ವೇದಿಕೆಯಾಗಿದೆ. ಕೆಪಿಎಲ್ ಅಂಬಾಸಿಡರ್ ಆಗಿರುವುದು ನನಗೆ ತುಂಬಾ ಖುಷಿ ನೀಡಿದೆ. ಕೆಪಿಎಲ್ ನಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಆಟಗಾರರು ಈ ಒಂದು ಕೆಪಿಎಲನಲ್ಲಿ ಆಡಲಿದ್ದಾರೆ ಎಂದು.

ಹುಬ್ಬಳ್ಳಿ ಟೈಗರ್ಸ್ ತಂಡದ ನಾಯಕ ವಿನಯ ಮಾತಾಡಿ, ಕೆಪಿಎಲ್ ಒಂದು ಸ್ಥಳೀಯ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ವೇದಿಕೆಯಾಗಿದೆ ಈ ಭಾರಿಯ ತಂಡದಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಹುಬ್ಬಳ್ಳಿ ಟೈಗರ್ಸ ತಯಾರಿ ನಡೆಸಿದೆ. ಅಲ್ಲದೇ ಉತ್ತಮ ಆಟ ಪ್ರದರ್ಶಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗುತ್ತೇವೆ ಎಂದರು.

ಈ ಸಂದರ್ಭದಲ್ಲಿ ಕೆ ಎ ಸಿ ಎನ ರಘುರಾಮಭಟ್, ಬಿ.ಕೆ.ರವಿ, ವಿನಯ ಮೃತ್ಯುಂಜಯ‌ ಸೇರಿದಂತೆ ಇತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ