ಕೊನೆಗೂ ರೂಟ್ ವಿರುದ್ಧ ಸೇಡು ತೀರಿಸಿಕೊಂಡ ಕ್ಯಾಪ್ಟನ್ ಕೊಹ್ಲಿ

ಬರ್ಮಿಂಗ್ಯಾಮ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊನೆಗೂ ಇಂಗ್ಲೆಂಡ್ ನಾಯಕ ಜೋ ರೂಟ್ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ.

ಎರಡು ವಾರಗಳ ಹಿಂದೆ ಕೊನೆಯ ಏಕದಿನ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಭಾರತ, ಇಂಗ್ಲೆಂಡ್ಗೆ ಏಕದಿನ ಸರಣಿಯನ್ನ ಬಿಟ್ಟುಕೊಟ್ಟಿತ್ತು. ಕೊನೆಯ ಪಂದ್ಯದಲ್ಲಿ ವಿನ್ನಿಂಗ್ ಶಾಟ್ ಬಾರಿಸಿದ್ದ ಇಂಗ್ಲೆಂಡ್ ಬ್ಯಾಟ್ಸ್ಮನ್ ಜೋ ರೂಟ್, ತಮ್ಮ ಬ್ಯಾಟ್ ಅನ್ನ ಡ್ರಾಪ್ ಮಾಡುವ ಮೂಲಕ, ಮೈಕ್ ಡ್ರಾಪ್ ಸೆಲೆಬ್ರೇಷನ್ ಅನ್ನ ಕ್ರಿಕೆಟ್ ಪಿಚ್ಗೂ ತಂದಿದ್ದರು. ಇದನ್ನ ಕಣ್ಣೆದುರಿಗೆ ಕಂಡಿದ್ದ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸರಣಿ ಸೋತ ನೋವಿನೊಂದಿಗೆ ಅವಮಾನವನ್ನ ಅನುಭವಿಸಿದ್ದರು. ಇದೀಗ ಮೊದಲ ಟೆಸ್ಟ್ನಲ್ಲಿ ಆ ಸಿಟ್ಟನ್ನ ಕೊಹ್ಲಿ ಹೊರಹಾಕಿದ್ದಾರೆ.

ಜೋ ರೂಟ್ ಹಾಗೂ ಜಾನಿ ಬೇರ್ಸ್ಟೋ ಜೋಡಿ ಬ್ಯಾಟ್ ಮಾಡುತ್ತಿದ್ದಾಗ ಈ ರನ್ ಔಟ್ ನಡೆಯಿತು. ಆರ್. ಅಶ್ವಿನ್ ಎಸೆತದಲ್ಲಿ ಎರಡು ರನ್ ಗಳಿಸಲೆತ್ನಿಸಿದ್ದಾಗ, ವಿರಾಟ್ ಕೊಹ್ಲಿ ಎಸೆದ ಚೆಂಡು ನೇರವಾಗಿ ಸ್ಟಂಪ್ಗೆ ತಾಗಿತು. ಈ ವಿಕೆಟ್ ಬೇರೆ ಯಾರದ್ದೋ ಅಲ್ಲ. ಬದಲಾಗಿ 80 ರನ್ ಗಳಿಸಿ ಭರ್ಜರಿಯಾಗಿ ಬ್ಯಾಟ್ ಬೀಸ್ತಿದ್ದ ರೂಟ್ ಅವರದ್ದಾಗಿತ್ತು. ಜೋ ರೂಟ್ ಅವರನ್ನ ರನ್ ಔಟ್ ಮಾಡಿದ ಕೊಹ್ಲಿ, ಇಂಗ್ಲೆಂಡ್ ಸ್ಟೇಡಿಯಂನತ್ತ ಸೈಲೆಂಟ್ ಸಿಗ್ನಲ್ ತೋರಿಸಿ, ಮೈಕ್ ಡ್ರಾಪ್ ಸೆಲೆಬ್ರೇಷನ್ ಮಾಡಿದ್ದು, ಆಂಗ್ಲರಲ್ಲಿ ಮತ್ತಷ್ಟು ಕಿಡಿ ಹೊತ್ತಿಸಿದಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ