ಬೆಂಗಳೂರು, ಆ.3-ಕನ್ನಡದ ಮೇಲಿರುವ ಕೀಳರಿಮೆ ಹೋಗಲಾಡಿಸಬೇಕು, ತಾಯ್ನಾಡಿನ ಭಾಷೆ ಮೇಲೆ ಆಸಕ್ತಿ, ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನುಬಳಿಗಾರ್ ಕರೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್‍ನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿಂದು 2017-18ನೇ ಸಾಲಿನ ಪ್ರವೇಶ, ಕಾವ, ಜಾಣ, ರತ್ನ ಮತ್ತು ಶಾಸನ ಶಾಸ್ತ್ರ ಡಿಪೆÇ್ರೀ ಪರೀಕ್ಷೆಗಳ ರ್ಯಾಂಕ್ ವಿಜೇತರು ಹಾಗೂ ಎಸ್‍ಎಸ್‍ಎಲ್‍ಸಿ-ಪಿಯುಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ರಾಜ್ಯಾದ್ಯಂತ ಅತಿ ಹೆಚ್ಚು ಅಂಕ ಪಡೆದವರಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಾತಿ, ಧರ್ಮ ಎಂಭ ಬೇಧವಿಲ್ಲದೆ ಎಲ್ಲರೂ ಕನ್ನಡ ಭಾಷೆ ಮೇಲೆ ಪ್ರೀತಿ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಕೇವಲ ವಿದ್ಯೆಗೆ ಸೀಮಿತಗೊಳ್ಳದೆ ಸಾಹಿತ್ಯ, ಕಲೆ, ಸಂಗೀತ, ಜಾನಪದ ಕಲೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
2011ರ ಮಾರ್ಚ್‍ನಲ್ಲಿ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು 16 ಲಕ್ಷ ಜನ ವೀಕ್ಷಿಸಿದ್ದರು. 300 ಮಂದಿ ಜಾನಪದ ಕಲಾವಿದರಿಗೆ ಅವಕಾಶ ಸಿಕ್ಕಿತ್ತು. ಜಾನಪದ ಕಲೆಗೆ ಪ್ರಸ್ತುತ ದಿನಗಳಲ್ಲಿ ಹಿನ್ನಡೆಯಾಗಿದೆ. ಈ ಕಲೆಯನ್ನು ಮುಂದೆ ತರುವ ಸಲುವಾಗಿ ನಿಂತು ಹೋಗಿರುವ ಜಾನಪದ ಜಾತ್ರೆಯನ್ನು ಮುಂದುವರೆಸುವಂತೆ ಮನುಬಳಿಗಾರ್ ಮನವಿ ಮಾಡಿದರು.
ಸಂಸ್ಕøತಿ ಚಿಂತಕ ಐ.ಎಂ.ವಿಠ್ಠಲಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಮೂಢನಂಬಿಕೆ ತೊರೆದು ವೈಚಾರಿಕೆ ಬೆಳೆಸಿಕೊಳ್ಳಬೇಕು. ಬಡತನ, ದುಃಖದ ಸಂಗತಿಗಳನ್ನು ಮರೆತು ನಂಬಿಕೆ, ವಿಶ್ವಾಸ, ಪ್ರೀತಿ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಸೃಜನಶೀಲತೆ ಮೈಗೂಡಿಸಿಕೊಂಡು ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಚಾರ ಕ್ರಾಂತಿಗೆ ಆಹ್ವಾನ ಎಂಬ ಪುಸ್ತಕವನ್ನು ಹೆಚ್ಚು ಓದುವುದರಿಂದ ವಿದ್ಯಾರ್ಥಿಗಳಿಗೆ ಒಳಿತಾಗಲಿದೆ ಎಂದರು.
ಕನ್ನಡ ಶಾಲೆಗಳಿಗೆ ನೀಡುವ ಅನುದಾನದಲ್ಲಿ ಒಂದು ಪೈಸೆಯನ್ನು ಸಂಬಂಧಪಟ್ಟವರು ಬಳಸಿಕೊಂಡರೆ ತಾಯಿಗೆ ದ್ರೋಹ ಬಗೆದಂತೆ ಎಂದರು.
ರಾಜ್ಯ-ರಾಷ್ಟ್ರಮಟ್ಟದವರೆಗೂ ಡಾಕ್ಟರೇಟ್ ಪದವಿಯನ್ನು ಅಭ್ಯರ್ಥಿಗಳು ನೇರವಾಗಿ ಪಡೆಯದೆ ಅಧಿಕಾರಿಗಳ ಸಹಾಯದಿಂದ ಪಡೆಯುತ್ತಿರುವುದು ದುಃಖದ ಸಂಗತಿ ಎಂದರು.
ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ನಗದು, ಮೊಮೆಂಟೋ ನೀಡಿ ಗೌರವಿಸಲಾಯಿತು.