ನವದೆಹಲಿ:ಆ-೨: ಮದ್ರಾಸ್ ಹೈಕೋರ್ಟ್ ನ ಮುಖ್ಯ ನ್ಯಾ. ಇಂದಿರಾ ಬ್ಯಾನರ್ಜಿ, ಒಡಿಶಾದ ಹೈಕೋರ್ಟ್ ನ ಮುಖ್ಯ ನ್ಯಾ. ವಿನೀತ್ ಸರಣ್ ಅವರ ಹೆಸರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಪದೋನ್ನತಿ ಪಡೆಯುವ ಪಟ್ಟಿಗೆ ಸೇರಿಸಲು ಕೇಂದ್ರ ನಿರ್ಧರಿಸಿದೆ.
ಇಬ್ಬರೂ ನ್ಯಾಯಾಧೀಶರ ಕಡತಗಳನ್ನು ಕಾನೂನು ಸಚಿವಾಲಯ ಅಂತಿಮ ಆದೇಶಕ್ಕಾಗಿ ಪ್ರಧಾನಿ ಕಚೇರಿಗೆ ಕಳಿಸಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ. ಆದರೆ ನ್ಯಾ. ಕೆಎಂ ಜೋಸೆಫ್ ನೇಮಕಾತಿಯ ಕಡತವನ್ನು ವಿಳಂಬ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ ಎನ್ನಲಾಗಿದೆ.
ಒಂದು ವೇಳೆ ಕೊಲಿಜಿಯಂ ಎರಡನೇ ಬಾರಿಗೂ ತನ್ನ ಶಿಫಾರಸ್ಸನ್ನು ಬದಲಾವಣೆ ಮಾಡದೇ ಯಥಾವತ್ ಕೇಂದ್ರ ಸರ್ಕಾರಕ್ಕೆ ನೀಡಿದ್ದೇ ಆದಲ್ಲಿ ಅದನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳಬೇಕಾಗುತ್ತದೆ. ಈ ಇಬ್ಬರು ನ್ಯಾಯಾಧೀಶರು ಹಾಗೂ ಈ ಹಿಂದೆಯೇ ಶಿಫಾರಸ್ಸು ಮಾಡಲಾಗಿದ್ದ ನ್ಯಾ. ಕೆ.ಎಂ ಜೋಸೆಫ್ ಅವರ ಹೆಸರನ್ನು ಕೊಲಿಜಿಯಂ ಶಿಫಾರಸ್ಸು ಮಾಡಿದೆ.
Supreme Court judge elevation,Collegium,Central Government