ಪಾಕ್​ ಪಿಎಂ ಆಗಿ ಇಮ್ರಾನ್​ ಖಾನ್​ ಪದಗ್ರಹಣ: ಅಮೀರ್​ ಖಾನ್​, ಗವಾಸ್ಕರ್​, ಕಪಿಲ್​ ದೇವ್​ಗೆ ಆಹ್ವಾನ

ಲಾಹೋರ್​: ಪಾಕಿಸ್ತಾನದ ಮುಂದಿನ ನೂತನ ಪ್ರಧಾನಿಯಾಗಿ ಇಮ್ರಾನ್​ ಖಾನ್​ ಬರುವ ಆಗಸ್ಟ್​​ 11ರಂದು ಪದಗ್ರಹಣ ಮಾಡಲಿದ್ದು, ಅದಕ್ಕಾಗಿ ಭಾರತದಿಂದ ಬಾಲಿವುಡ್​ ನಟ ಅಮೀರ್​ ಖಾನ್​ ಸೇರಿದಂತೆ ಅನೇಕ ಸೆಲಿಬ್ರೆಟಿಗಳಿಗೆ ಆಹ್ವಾನ ನೀಡಿರುವುದಾಗಿ ತಿಳಿದು ಬಂದಿದೆ.

ಈಗಾಗಲೇ ಲಭ್ಯವಾಗಿರುವ ಮಾಹಿತಿ ಪ್ರಕಾರ ಭಾರತದಿಂದ ನಟ ಅಮೀರ್​ ಖಾನ್​, ಮಾಜಿ ಕ್ರಿಕೆಟರ್ಸ್​ಗಳಾದ ಕಪಿಲ್​ ದೇವ್​, ಸುನಿಲ್​ ಗವಾಸ್ಕರ್​ ಹಾಗೂ ನವಜ್ಯೋತ್​ ಸಿಂಗ್​ ಸಿದ್ದುಗೆ ಆಹ್ವಾನ ನೀಡಿರುವುದಾಗಿ ತಿಳಿದು ಬಂದಿದೆ.
ಆದರೆ,  ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನ ನೀಡಿರುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ ಚುನಾವಣೆಯಲ್ಲಿ ಬಹುಮತ ಗಳಿಸಿದ ಇಮ್ರಾನ್ ಖಾನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಮಾತನಾಡಿರುವುದು ಭಾರತ-ಪಾಕ್ ನಡುವೆ  ಹೊಸ ಅಧ್ಯಾಯ ಪ್ರಾರಂಭವಾಗುವ ನಿಟ್ಟಿನಲ್ಲಿ ಸ್ವಾಗತಾರ್ಹ ಬೆಳವಣಿಗೆ ಎಂದು ಪಿಟಿಐ ನಾಯಕ ಫಾಹದ್ ಚೌಧರಿ ಹೇಳಿದ್ದಾರೆ.
ಪಿಟಿಐ ಪಕ್ಷದ ಮುಖ್ಯಸ್ಥರು ತಿಳಿಸಿರುವ ಪ್ರಕಾರ ಸಾರ್ಕ್​ ರಾಷ್ಟ್ರಗಳ ಮುಖಂಡರಿಗೆ ಇಮ್ರಾನ್​ ಖಾನ್​ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುತ್ತಿದ್ದು, ಇದೇ ವೇಳೆ ಮೋದಿಯವರಿಗೂ ಆಹ್ವಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ