ಏಕಕಾಲ ಚುನಾವಣೆಗೆ ಸದ್ದಿಲ್ಲದೆ ಸಿದ್ಧತೆ

ಹೊಸದಿಲ್ಲಿ: ಏಕಕಾಲದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆ ನಡೆಯುವ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಚುನಾವಣ ಆಯೋಗ ಮಾತ್ರ ಇದಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲು ಆರಂಭಿಸಿದೆ. ಸಾಮಾನ್ಯವಾಗಿ ಲೋಕಸಭೆ ಚುನಾವಣೆಗೆ 365 ದಿನ ಅಂದರೆ, ಒಂದು ವರ್ಷ ಇರುವಾಗ ದೇಶದ ವಿವಿಧ ಭಾಗಗಳಲ್ಲಿನ ಹವಾಮಾನ, ಪರೀಕ್ಷೆ ಮತ್ತು ಇತರ ವ್ಯವಸ್ಥೆಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಸಾಲಿನಲ್ಲಿ ಅದು 395 ದಿನಗಳ ಮೊದಲೇ ತಯಾರಿ ಆರಂಭಿಸಿದೆ. ಅದಕ್ಕೂ ಒಂದು ಪ್ರಮುಖ ಕಾರಣವಿದೆ. ಮುಂದಿನ ಚುನಾವಣೆಯಲ್ಲಿ ಸಂಪೂರ್ಣವಾಗಿ ವಿದ್ಯು ನ್ಮಾನ ಮತಯಂತ್ರ (ಇವಿಎಂ), ಮತ ದೃಢೀಕರಣ ವ್ಯವಸ್ಥೆ (ವಿವಿ ಪ್ಯಾಟ್‌) ಜಾರಿಗೆ ಬರುವ ಹಿನ್ನೆಲೆಯಲ್ಲಿ ನಿಗದಿಗಿಂತ ಮೊದಲೇ ಸಿದ್ಧತೆ ಮಾಡಿಕೊಳ್ಳ ಲಾಗುತ್ತಿದೆ ಎಂದು ಆಯೋಗದ ಮೂಲಗಳು ಹೇಳಿಕೊಂಡಿದ್ದಾಗಿ “ದ ಎಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

ಈ ಬಾರಿ ಎಂ3 ಇವಿಎಂಗಳನ್ನು ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಮೊದಲ ಹಂತ ದಲ್ಲಿ 450 ಮಂದಿ ಪರಿಣಿತರು ಚುನಾವಣ ಆಯೋಗದ ಅಧಿಕಾರಿ, ಸಿಬಂದಿಗೆ ತರಬೇತಿ ನೀಡಲಿದ್ದಾರೆ. ಮಾನವ ಸಹಜ ತಪ್ಪುಗಳನ್ನು ಕಡಿಮೆಗೊಳಿಸಲು ಆದ್ಯತೆ ನೀಡಲಾಗಿದೆ. ಸದ್ಯ ಇರುವ 16ನೇ ಲೋಕಸಭೆಯ ಅವಧಿ 2019ರ ಜೂ.3ರಂದು ಮುಕ್ತಾಯವಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ