
ಹುಬ್ಬಳ್ಳಿ: ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಅಮಿತ್ ಬದ್ದಿ ಹಾಗೂ ಗಣೇಶ ಮಿಸ್ಕಿನ್ ಬಂಧಿಸಿರುವ ಹಿನ್ನೆಲೆಯಲ್ಲಿ ಎಸ್.ಎಸ್.ಕೆ ಸಮಾಜದಿಂದ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಬಂಧಿತರಿಬ್ಬರೂ ಎಸ್.ಎಸ್.ಕೆ ಸಮಾಜದವರು. ಇವರಿಬ್ಬರ ಬಂಧನದಿಂದ ರೊಚ್ವಿಗೆದ್ದ ಸೋಮವಂಶ ಕ್ಷತ್ರೀಯ ಸಮಾಜ. ‘ಜಸ್ಟಿಸ್ ಫಾರ್ ಅಮಿತ್ ಬದ್ದಿ & ಗಣೇಶ ಮಿಸ್ಕಿನ್’ ಹೆಸರಲ್ಲಿ ಅಭಿಯಾನ ಆರಂಭಿಸಿದ್ದಾರೆ. ಸಮಾಜದ ಮುಖಂಡರಾದ ಅಶೋಕ ಕಾಟವೆ, ಮಾಜಿ ಮೇಯರ್ ಡಿ.ಕೆ. ಚೌಹಾನ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಜರುಗಿತು. ಆಂದೋಲದನ ಮೂಲಕ ರಾಜ್ಯ ಸರ್ಕಾರವನ್ನ ಎಚ್ವರಿಸೊ ಪ್ರಯತ್ನವನ್ನು ಎಸ್.ಎಸ್.ಕೆ ಸಮಾಜ ಮಾಡುತ್ತಿದೆ. ಬಂಧಿತರಿಬ್ಬರೂ ಅಮಾಯಕರು. ಅವರನ್ನ ತಕ್ಷಣವೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.