ಉತ್ತರ ಹೋರಾಟ ಮತಣದಂಡನೆಗೂ ಜಗ್ಗಲ್ಲ ಕರಿಗಾರ

ಹುಬ್ಬಳ್ಳಿ: ಉತ್ತರ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ನಾಳೆ ಉತ್ತರ ಕರ್ನಾಟಕದ 13 ಜಿಲ್ಲೆಗಳನ್ನು ಬಂದ್ ಮಾಡಿ ಹೋರಾಟ ಮಾಡಲಾಗುವುದು. ಮರಣ ದಂಡನೆ ವಿಧಿಸಿದರು ಕೂಡ ಹೋರಾಟ ಹಿಂಪಡೆಯುವುದಿಲ್ಲ. ಕರ್ನಾಟಕ ಏಕೀಕರಣವಾಗಿ 62 ವರ್ಷಗಳಾದರು ಕೂಡ ಉತ್ತರ ಕರ್ನಾಟಕ ಯಾವುದೇ ಅಭಿವೃದ್ಧಿ ಕಾಣದಿರುವ ಹಿನ್ನೆಲೆಯಲ್ಲಿ ಬಂದ್ ಮಾಡಲಾಗುತ್ತಿದೆ ಮಾಡು ಇಲ್ಲವೇ ಮಡಿ ದೇಯದೊಂದಿಗೆ ಹೋರಾಟಕ್ಕೆ ಚಾಲನೇ ನೀಡಲಾಗುತ್ತಿದೆ ಹಾಗೂ ಇದು ಯಾವುದೇ ರಾಜಕೀಯ ಪ್ರೇರಿತ ಹೋರಾಟವಲ್ಲ ಎಂದು ಉತ್ತರ ಕರ್ನಾಟಕ ರೈತ ಸಂಘದ ಬಸವರಾಜ ಕರಿಗಾರ ತಿಳಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಂತರವಾಗಿ ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಖಂಡನೀಯವಾಗಿದೆ. ಉತ್ತರ ಕರ್ನಾಟಕದ ಕ್ಷಣಿಕ ನರಕಯಾತ್ರೆಯನ್ನು ತಪ್ಪಿಸುವ ಹಿನ್ನಲೆಯಲ್ಲಿ ಉತ್ತರ ಕರ್ನಾಟಕ ರೈತ ಸಂಘದ ಹೋರಾಟ ಸಮಿತಿಯಿಂದ ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯ ಹೋರಾಟವನ್ನು ನಾಳೆಯ ದಿನ ಉತ್ತರ ಕರ್ನಾಟಕದ 13 ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟ, ರಾಯಚೂರ, ಕೊಪ್ಪಳ, ಗದಗ, ಧಾರವಾಡ, ಬಳ್ಳಾರಿ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಗಳ ಅಂಗಡಿ ಮುಗ್ಗಟ್ಟು ಹಾಗೂ ಶಾಲಾ ಕಾಲೇಜು ಸರ್ಕಾರಿ ಸಂಘ ಸಂಸ್ಥೆಗಳನ್ನು ಬಂದ್ ಮಾಡಿ ಹೋರಾಟಕ್ಕೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯಿಂದ ಕರೆ ನೀಡಲಾಗಿದೆ. ಸುಮಾರು ಮೂರು ದಶಕಗಳಿಂದ ಮಹದಾಯಿ ಹೋರಾಟ ನಡೆಯುತ್ತಿದ್ದರೂ ಕೂಡ ಯಾವುದೇ ಕವಡೆ ಕಾಸಿನ ಕಿಮ್ಮತ್ತಿನ ನೀಡದ ರಾಜಕೀಯ ಪ್ರತಿನಿಧಿಗಳು ಉತ್ತರ ಕರ್ನಾಟಕದ ಮೇಲೆ ಪ್ರತಿಯೊಂದು ರಂಗದಲ್ಲಿಯೂ ಕೂಡ ಅನ್ಯಾಯ ಮಾಡುತ್ತಾ ಬಂದಿದೆ. ಅಲ್ಲದೇ ಉತ್ತರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ ಹಿತದೃಷ್ಟಿಯಿಂದ ಹಾಗೂ ಉದ್ಯೋಗ, ಶಿಕ್ಷಣ, ನೀರಾವರಿ, ಹಸಿರುಕ್ರಾಂತಿ, ಐಟಿಯಂತಹ ಬೃಹತ ಕೈಗಾರಿಕೆಗಳನ್ನು ಸ್ಥಾಪಿಸುವ ಕನಸನ್ನು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಹೊಂದಿದೆ. ಅಲ್ಲದೇ ನಂಜುಂಡಪ್ಪ ಜಾರಿಗೊಳಿಸುವಲ್ಲಿ ಕೂಡ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ಈ ಅನ್ಯಾಯ ಖಂಡಿಸುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ವಿವಿಧ ಸಂಘಟನೆಗಳು ಕೈ ಜೋಡಿಸುವುದರ ಮೂಲಕ ಒಗ್ಗಟ್ಟಾಗಿ ತಕ್ಕ ಪಾಠ ಕಲಿಸುವ ಕಾರ್ಯವನ್ನು ಮಾಡಬೇಕಾಗಿದೆ.ಅಲ್ಲದೇ ಹೋರಾಟಕ್ಕೆ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ, ಉತ್ತರ ಕರ್ನಾಟಕ ರಕ್ಷಣಾ ವೇದಿಕೆ, ಅನುದಾನ ರಹಿತ ಶಾಲೆಗಳ ಒಕ್ಕೂಟ, ವಿಕಾಸ ವೇದಿಕೆ, ಕಟ್ಟಡ ಕಾರ್ಮಿಕ ಸಂಘ, ಪದವೀಧರರ ಸಂಘ, ಪರಿವರ್ತನಾ ಸಮುದಾಯ, ಜನಶಕ್ತಿ ಸೇನಾ, ಚಲನಚಿತ್ರ ವಾಣಿಜ್ಯೋದ್ಯಮ, ಗುತ್ತಿಗೆದಾರರ ಸಂಘ, ಶಾಮಿಯಾನ ಮಾಲಿಕರ ಸಂಘ, ಆಟೋ,ಟ್ಯಾಕ್ಸಿ, ಲಾರಿ ವಾಹನ ಮಾಲಿಕರ ಹಾಗೂ ಚಾಲಕರ ಸಂಘ, ಸಾಹಿತಿಗಳ ಸಂಘ, ಯುವಶಕ್ತಿ ಸಂಘ, ಕರ್ನಾಟಕ ವಿದ್ಯಾರ್ಥಿಗಳ ಪರಿಷತ್ ಸೇರಿದಂತೆ ಒಟ್ಟು 23 ಇತರ ಸಂಘಟನೆಗಳು ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಕೈ ಜೋಡಿಸಲಿವೆ ಎಂದರು.
ಅಲ್ಲದೇ ಮರಣದಂಡನೆ ನೀಡಿದರು ಕೂಡ ಹೋರಾಟದಿಂದ ಹಿಂದೆ ಸರಿಯುವ ಮಾತಿಲ್ಲ ಹೋರಾಟದ ಕುರಿತು ಸಮೀಕ್ಷೆ ನಡೆಸಿದರೆ ಪ್ರತಿಶತ 90ರಷ್ಟು ಜನರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕು ಎಂಬುವಂತದು ತಿಳಿದು ಬಂದಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸೋಮಶೇಖರ ಬರಿಗುಂಡಿ, ಬಿ.ಎ.ಪಾಟೀಲ, ನಾಗೇಶ ಗೋಲಶೆಟ್ಟಿ, ವಿರೂಪಾಕ್ಷಪ್ಪ ಕಳ್ಳಿಮನಿ, ಶ್ರೀಶೈಲ ಪಸಾರ ಸೇರಿದಂತೆ ಇತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ