ಅಣ್ಣ ಪ್ರಜ್ವಲ್ ನನಗೆ ಪ್ರತಿಸ್ಪರ್ಧಿಯಲ್ಲ: ಪ್ರಣಮ್ ದೇವರಾಜ್

ಬೆಂಗಳೂರು: ಈ ವಾರ ತೆರೆ ಕಾಣುತ್ತಿರುವ ’ಕುಮಾರಿ 21ಎಫ್’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಇನ್ನೋರ್ವ ನಾಯಕ ನಟನ ಆಗಮನವಾಗುತ್ತಿದೆ. ಡೈನಾಮಿಕ್ ಹೀರೋ ದೇವರಾಜ್ ಅವರ ಪುತ್ರ, ಪ್ರಜ್ವಲ್ ದೇವರಜ್ ಅವರ ಸೋದರರಾದ ಪ್ರಣಮ್ ದೇವರಾಜ್ ‘ಕುಮಾರಿ 21ಎಫ್’  ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ತೆಲುಗು ಚಿತ್ರದ ರೀಮೇಕ್ ಆಗಿರುವ ‘ಕುಮಾರಿ 21ಎಫ್’  ನಲ್ಲಿ ನಾಯಕನಾಗಿರುವ ಪ್ರಣಮ್ “ನಾನು ನಾಯಕ ನಟನ ಪುತ್ರನಾಗಿ ಚಿತ್ರರಂಗ ಪ್ರವೇಶಿಸಲು ಇಚ್ಚಿಸಲಾರೆ. ಒಂದು ಒಳ್ಳೆ ಕಥೆಯ ಮೂಲಕ ನಟನಾಗಿ ನನ್ನ ಸಾಮರ್ಥ್ಯವನ್ನು ಪ್ರದರ್ಶಿಸಲು ನಾನು ಬಯಸುತ್ತೇನೆ. ಇದೀಗ ಒಂದು ಕಮರ್ಷಿಯಲ್ ಚಿತ್ರದ ಮೂಲಕ ನಾನು ನಾಯಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದೇನೆ” ಎಂದಿದ್ದಾರೆ.
ಕುಮಾರಿ 21ಎಫ್ ಚಿತ್ರ ಒಪ್ಪಿಕೊಳ್ಳುವ ಮುನ್ನ ಪ್ರಣಮ್ ಎಂಟು ಬೇರೆ ಬೇರೆ ಸ್ಕ್ರಿಪ್ಟ್ ಗಳನ್ನು ನೋಡಿದ್ದಾರೆ. ಆದರೆ ಕುಮಾರಿ…. ಕಥೆಯು ಅವ್ರ ಮನ್ಸ್ಸಿಗೆ ಮುಟ್ಟಿದೆ. “ಚಿತ್ರದಲ್ಲಿ, ಹಾಸ್ಯ, ಆಕ್ಷನ್,ಎಮೋಷನ್ಸ್, ಪ್ರೀತಿ ಮತ್ತು ಮಾಸ್ ಅಪೀಲ್ ಎಲ್ಲವೂ ಇದೆ. ಇದು ನನಗೆ ಮೆಚ್ಚುಗೆಯಾಗಿದೆ” ಅವರು ಹೇಳಿದ್ದಾರೆ.
ಇನ್ನು ಕುಮಾರಿ… ಚಿತ್ರದ ರೀಮೇಕ್ ನಲ್ಲಿ ನಟಿಸುವುದಕ್ಕಾಗಿಯೇ ಪ್ರಣಮ್ ಗೆ ನಾಲ್ಕು ಬೇರೆ ಬೇರೆ ನಿರ್ಮಾಪಕರು ಕಾಲ್ ಶೀಟ್ ಕೇಳಿದ್ದರು. ನಾಲ್ಕನೇ ಬಾರಿ ತೆಲುಗು ನಿರ್ಮಾಪಕ, ಮತ್ತು ಲೇಖಕ ಸುಕುಮಾರ್ ನನ್ನ ತಂದೆಗೆ ಕರೆ ಮಾಡಿ ನಾನು ಸ್ಕ್ರಿಪ್ಟ್ ಗೆ ಸರಿಯಾಗಿ ಹೊಂದುತ್ತೇನೆ ಎಂದಿದ್ದಾರೆ. ಅದಾಗ ನನಗೆ ಸಹ ಚಿತ್ರದಲ್ಲಿ ಅಭಿನಯಿಸಬೇಕು ಎನ್ನುವ ನಿರ್ಧಾರ ಮೂಡಿತ್ತು.ಇಷ್ಟಕ್ಕೂ ನಾನೇಕೆ ಪ್ರಯತ್ನಿಸಬಾರದು?” ಅವರು ಹೇಳಿದರು..
ಚಿತ್ರರಂಗ ನನಗೆ ಹೊಸದಲ್ಲ ಎನ್ನುವ ಪ್ರಣಮ್”ಅಣ್ಣ(ಪ್ರಜ್ವಲ್ ದೇವರಾಜ್) ಅವರು ಪ್ರಥಮ ಬಾರಿಗೆ ಚಿತ್ರದಲ್ಲಿ ಕಾಣಿಸಿಕೊಂಡಾಗ ಯಾವ ಬಗೆಯ ಪ್ರತಿಕ್ರಿಯೆ ಸಿಕ್ಕಿತ್ತು ನಾನು ಕಂಡಿದ್ದೇನೆ.ನನ್ನ ಚಿತ್ರಕ್ಕೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಲಿದ್ದಾರೆ” ’ಮನಸೆ ಓ ಮನಸೆ’ ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸಿ ಪ್ರಶಸ್ತಿ ಗೆದ್ದಿದ್ದ ಪ್ರಣಮ್ ಮುಂದೊಂದು ದಿನ ಪೂರ್ಣ ಪ್ರಮಾಣದ ನಟನಾಗುವ ನಂಬಿಕೆ ಹೊಂದಿದ್ದರು. “ನಾನು ಕೆಲವೇ ಬಗೆಯ ಪಾತ್ರಗಳಿಗೆ ನನ್ನನ್ನು ಸೀಮಿತಗೊಳಿಸಿಕೊಳ್ಳಲಾರೆ. ಬದಲಿಗೆ, ನಾನು ಎಲ್ಲಾ ರೀತಿಯ ಪಾತ್ರಗಳಲ್ಲಿ ಅಭಿನಯಿಸಲು  ಬಯಸುತ್ತೇನೆ. ಪ್ರೇಕ್ಷಕರು ನನ್ನನ್ನು ಒಪ್ಪಿಕೊಳ್ಳುತ್ತಾರೆ ಎನ್ನುವುದು ನನ್ನ ನಂಬಿಕೆ, ಇಷ್ಟಕ್ಕೂ ನನಗಿದು ಪರೀಕ್ಷೆಯ ಸಮಯ. ಈ ಚಿತ್ರದ ಕುರಿತ ಪ್ರೇಕ್ಷಕರ ಪ್ರತಿಕ್ರಿಯೆ ಬಳಿಕ ನಾನು ನನ್ನ ಮುಂದಿನ ಚಿತ್ರಗಳ ಆಯ್ಕೆ ಬಗೆಗೆ ನಿರ್ಧ್ರಿಸಲಿದ್ದೇನೆ.” ಪ್ರಣಮ್ ಹೇಳಿದ್ದಾರೆ.
ಪ್ರತಿ ಸನ್ನಿವೇಶವನ್ನು ಕಲಿಕೆಯ ಭಾಗವಾಗಿ ಕಾಣುತ್ತಿರುವ ಪ್ರಣಮ್ ರೆದ ಮನಸ್ಸಿನೊಂದಿಗೆ ಚಿತ್ರರಂಗದಲ್ಲಿ ಮುಂದಡಿ ಇಡುತ್ತಿದ್ದಾರೆ.ಚಿತ್ರ ಬಿಡುಗಡೆ ವಿಳಂಬವಾಗಿರುವ ಬಗ್ಗೆ ಸಹ ಪ್ರಣಮ್ ತಲೆ ಕೆಡಿಸಿಕೊಂಡಿಲ್ಲ. “ನಾನು ತಾಳ್ಮೆ ಕಳೆದುಕೊಳ್ಳುವುದಿಲ್ಲ.ನಾನಿದನ್ನು ಒಂದು ಪಾಠವೆಂದು ಭಾವಿಸುತ್ತೇನೆ. ಇದು ನನ್ನ ಭವಿಷ್ಯದ ಚಿತ್ರ ಜೀವನಕ್ಕೆ ಸಹಕಾರಿಯಾಗಲಿದೆ.ನಾನು ಕಲಿಕೆಯನ್ನು ನಿಲ್ಲಿಸಲಾರೆ. ನನ್ನ ತಂದೆ ಇಂದೂ ಸಹ ನನಗೆ ಇದನ್ನೇ ಹೇಳುತ್ತಾರೆ – ಅನುಭವವೇ ಅತ್ಯುತ್ತಮ ಶಿಕ್ಷಕ.” ಅವರು ಹೇಳಿದರು.
“ಅಣ್ಣ ಪ್ರಜ್ವಲ್ ನನಗೆ ಪ್ರತಿಸ್ಪರ್ಧಿಯಲ್ಲ.ಅವರು ತಮ್ಮದೇ ರೀತಿಯಲ್ಲಿ ಬೆಳೆದಿದ್ದಾರೆ. ಅವರು ಈಗಿರುವ ಸ್ಥಾನ ಗಳಿಸಲು ಹತ್ತು ವರ್ಷ ತೆಗೆದುಕೊಂಡಿದ್ದಾರೆ. ಭವಿಷ್ಯದಲ್ಲಿ ಸಹ ನಮ್ಮಿಬ್ಬರ ಚಿತ್ರ ಒಂದೇ ದಿನ ತೆರೆ ಕಾಣುವುದಿಲ್ಲ ಎಂದು ನಾನು ಭಾವಿಸುತ್ತೇನೆ” ಪ್ರಣಮ್ ಹೇಳುತ್ತಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ