ಪ್ರಣಾಮ್ ದೇವಾರಾಜ್ ಅಭಿನಯದ ನೂತನ ಚಿತ್ರ ಆರಂಭ

ಶ್ರೀಭ್ರಮರಾಂಬ ಸಮೇತ ಮಲ್ಲಿಕಾರ್ಜುನಸ್ವಾಮಿ ಫಿಲಂಸ್ ಹಾಗೂ ಸಿಂಹ ಫಿಲಂಸ್ ಲಾಂಛನದಲ್ಲಿ ಮಲ್ಲಿಕಾರ್ಜುನ ಜಂಗಮ್, ಅನಿಲ್ ಹಾಗೂ ಕಿಶೋರ್ ಅವರು ನಿರ್ಮಿಸುತ್ತಿರುವ ಹಾಗೂ ಖ್ಯಾತ ನಟ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಾಮ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ ಪ್ರೊಡಕ್ಷನ್ ನಂ 1 ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮೋದಿ ಆಸ್ಪತ್ರೆ ಬಳಿಯ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ನಿರ್ದೇಶಕ ಪವನ್ ಒಡೆಯರ್ ಚಿತ್ರದ ಪ್ರಥಮ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ನಟ ದೇವಾರಾಜ್ ಕುಟುಂಬ ಸಮೇತ ಆಗಮಿಸಿ ನೂತನ ಚಿತ್ರಕ್ಕೆ ಶುಭ ಕೋರಿದರು. ವೇಮರೆಡ್ಡಿ ಈ ಚಿತ್ರದ ಸಹ ನಿರ್ಮಾಪಕರು.

ಸಾಯಿಶಿವನ್ ಜೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸಾಗರ್ ಮಹತಿ ಸಂಗೀತ ನೀಡುತ್ತಿದ್ದಾರೆ. ಪ್ರಣಾಮ್ ದೇವರಾಜ್, ರವಿಶಂಕರ್, ಪವಿತ್ರಲೋಕೇಶ್, ಸಾಧು ಕೋಕಿಲ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಆಗಸ್ಟ್ ಎರಡನೇ ವಾರದಲ್ಲಿ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ