
ಲಕ್ನೋ: ಆ:1; ಉತ್ತರ ಪ್ರದೇಶದಲ್ಲಿ ವರುಣನ ಆರ್ಭಟ ಮತ್ತಷ್ಟು ತೀವ್ರವಾಗಿದೆ. ಕಳೆದ 24 ತಾಸುಗಳಲ್ಲಿ ರಾಜ್ಯದ ವಿವಿಧೆಡೆ ಭಾರೀ ಮಳೆಯಿಂದ ಮತ್ತೆ 14 ಮಂದಿ ಬಲಿಯಾಗಿ ಹಲವು ಗಾಯಗೊಂಡಿದ್ದಾರೆ. ಇದರೊಂದಿಗೆ ಒಂದು ವಾರದಿಂದ ಮಳೆ ಅನಾಹುತದಲ್ಲಿ ಸತ್ತವರ ಸಂಖ್ಯೆ 106ಕ್ಕೇರಿದೆ.
ಫರೂಕಾಬಾದ್, ಖೇರಿ, ರಾಯ್ಬರೇಲಿ, ಲಕ್ನೋ, ಕಾನ್ಪುರ್ ದೆಹತ್, ಬಾರಾಬಂಕಿ, ಸೀತಾಪುರ್ ಮತ್ತು ಸುಲ್ತಾನ್ಪುರ್ಗಳಲ್ಲಿ ಸಾವು-ನೋವಿನ ವರದಿಯಾಗಿದೆ.
ಮಳೆ ಆರ್ಭಟಕ್ಕೆ ಈವರೆಗೆ 106 ಮಂದಿ ಬಲಿಯಾಗಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ಧಾರೆ. 80 ಜಾನುವಾರುಗಳು ಮೃತಪಟ್ಟಿದ್ದು, 600ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ.
ಮಳೆ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ.