ಹುಬ್ಬಳ್ಳಿ- ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಬರುವ ಆಗಷ್ಟ ಎರಡರಂದು ಹಮ್ನಿಕೊಂಡಿರುವ ಉತ್ತರ ಕರ್ನಾಟಕ ಬಂದ್ ಕರೆಗೆ ನಮ್ಮ ಸಂಘಟನೆಯ ಬೆಂಬಲವಿಲ್ಲ ಎಂದು ಉತ್ತರ ಕರ್ನಾಟಕ ಜನ ಶಕ್ತಿ ಸೇನೆ ಅಧ್ಯಕ್ಷ ಎಸ್. ಶಂಕರಣ್ಣ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬರುವ ಎರಡು ಕೊಟ್ಟಿರುವ ಬಂದ್ ಕರೆಯು ರಾಜಕೀಯ ಪಕ್ಷದ ಪ್ರಾಯೋಜಿತ ಹೋರಾಟವಾಗಿದೆ. ಹೀಗಾಗಿ ಅಂದು ನಡೆಯುವ ಬಂದ್ ಕರೆಗೆ ವಿರೋಧವಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಮತ್ತು ಬಂದ್ ಮಾಡುವವರ ವಿರುದ್ಧ ಹೋರಾಡುತ್ತೇವೆ ಎಂದರು. ಕೇವಲ ರಾಜಕೀಯ ಉದ್ದೇಶದಿಂದ ಉತ್ತರ ಕರ್ನಾಟಕ ಬಂದ್ ಕರೆ ನೀಡಲಾಗಿದೆ. ರಾಜಕೀಯ ಲಾಭಕ್ಕಾಗಿ ಹೆಸರೇ ಇಲ್ಲದ ಕೆಲ ಸಂಘಟೆಗಳು ಕೊಟ್ಟಿರುವ ಕರೆಗೆ ಯಾವುದೇ ಬೆಲೆ ಇಲ್ಲ ಎಂದರು. ನಿಜವಾದ ಉತ್ತರ ಕರ್ನಾಟಕ ಹೋರಾಟವು, ಮಾಜಿ ಸಿ.ಎಂ. ಜಗದೀಶ ಶೆಟ್ಟರ, ಸಂಸದ ಪ್ರಲ್ಹಾದ ಜೋಶಿ, ಉಮೇಶ ಕತ್ತಿ ಅವರ ಮನೆಯಿಂದ ಪ್ರಾರಂಭವಾಗಲಿ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದ್ದು, ಈ ಭಾಗದ ಪ್ರತಿಯೊಬ್ಬ ರಾಜಕಾರಣಿಯಿಂದ ಎಂದು ಹರಿ ಹಾಯ್ದರು. ಅಷ್ಟೇ ಅಲ್ಲದೇ ಬರುವ ನವೆಂಬರ್ 1 ಕನ್ನಡ ರಾಜ್ಯೋತ್ಸವವನ್ನ ಕರಾಳದಿನವನ್ನಾಗಿ ಆಚರಿಸಲು ಉದ್ದೇಶಿಸಿಲಾಗಿದೆ ಎಂದರು.