ಹುಬ್ಬಳ್ಳಿ- ಕದ್ದ ವಾಹನಗಳನ್ನು ಸಾಗಣೆ ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಕಸಾಬಾಪೇಟೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹಿರೇಹೊನ್ನಳ್ಳಿಯ ಗಾಮನಗಟ್ಟಿ ಓಣಿಯ ನಿವಾಸಿ ಶ್ರೀಧರ (24) ಮತ್ತು ಮಲ್ಲಿಕಾರ್ಜುನ (24) ಬಂಧಿತ ಆರೋಪಿಗಳು. ಬಂಧಿಯರಿಂದ 5.95 ಲಕ್ಷ ಮೌಲ್ಯದ 7 ಬೈಕ್ ಗಳು ಒಂದು ಟಾಟಾ ಏಸ್ ವಾಹನ ವಶಪಡಿಸಿಕೊಂಡಿದ್ದಾರೆ.ನಗರದ ಹೊರವಲಯ್ ಗಬ್ಬೂರು ಸಮೀಪ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ದ್ವಿಚಕ್ರ ವಾಹನಗಳನ್ನು ತುಂಬಿಕೊಂಡು ಹೋಗುತ್ತಿದ್ದ ಟಾಟಾ ಏಸ್ ವಾಹನ ನಿಲ್ಲಿಸಿ ವಾಹನ ದಾಖಲಾತಿಗಳನ್ನು ಕೇಳಿದಾಗ ಸಮಪರ್ಕ ಉತ್ತರ ನೀಡಲಿಲ್ಲ. ಆಗ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿದ್ದ ವಾಹನಗಳನ್ನು ಧಾರವಾಡಕ್ಕೆ ಸಾಗಿಸುತ್ತಿರುವದಾಗಿ ಒಪ್ಪಿಕೊಂಡಿದ್ದಾರೆ.