ಲಾಂಬೊಕ್ ದ್ವೀಪ ಪ್ರದೇಶದಲ್ಲಿ ಭೂಕಂಪ: 10 ಮಂದಿ ಸಾವು

ಲಾಂಬೊಕ್:ಜು-೨೯: ಇಂಡೊನೇಷ್ಯಾದ ಲಾಂಬೊಕ್ ದ್ವೀಪ ಪ್ರದೇಶದಲ್ಲಿ ಇಂದು 6.4 ರಷ್ಟು ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ. 40 ಮಂದಿ ಗಾಯಗೊಂಡಿದ್ದಾರೆ.

ಇಂಡೊನೇಷ್ಯಾ ವಿಪತ್ತು ನಿರ್ವಹಣಾ ತಂಡದ ವಕ್ತಾರ ಸುಟೊಪೊ ಪುರ್ವೊ ನ್ಯೂಗ್ರೋಹೊ ನೀಡಿದ್ದು, ಭೂಕಂಪದಿಂದಾಗಿ ಹಲವು ಮನೆಗಳು ಹಾನಿಗೊಂಡಿವೆ. ಸಾವಿನ ಸಂಖ್ಯೆಯು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಲಾಂಬೊಕ್ ದಕ್ಷಿಣ ಇಂಡೊನೇಷ್ಯಾದ ಪ್ರಸಿದ್ಧ ಪ್ರವಾಸಿ ತಾಣ. ಬಾಲಿ ರೆಸಾರ್ಟ್ ದ್ವೀಪದ 100 ಕಿಮೀ ಪೂರ್ವಕ್ಕೆ ಇದೆ. ಇಂಡೊನೇಷ್ಯಾದ ಸಾವಿರಾರು ದ್ವೀಪಸಮೂಹವು ಈ ಪ್ರದೇಶದಲ್ಲಿದ್ದು, ಪ್ರಸಿದ್ಧ ಹಾಟ್ ಸ್ಪಾಟ್ ಕೇಂದ್ರವಾಗಿದೆ.

2004ರಲ್ಲಿ ಸುಮಾತ್ರ ದ್ವೀಪ ಪ್ರದೇಶದಲ್ಲಿ 9.3 ರಷ್ಟು ತೀವ್ರತೆಯ ಭೂಕಂಪನದಿಂದಾಗಿ ಸುನಾಮಿ ಅಪ್ಪಳಿಸಿತ್ತು. ಇದರಿಂದಾಗಿ ಇಂಡೊನೇಷ್ಯಾದ 1 , 68 000ಮಂದಿ ಸೇರಿದಂತೆ ಹಿಂದೂ ಮಹಾಸಾಗರದಲ್ಲಿ 2 ಲಕ್ಷದ 20 ಸಾವಿರ ಜನರು ಮೃತಪಟ್ಟಿದ್ದರು.

Indonesia,Earthquake, Lombok Island

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ