ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್​ ಕಾರ್ ಮೇಲೆ ಪೆಟ್ರೋಲ್​ ಬಾಂಬ್​ ದಾಳಿ

ಚೆನ್ನೈ:ಜು-29: ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್​ ಮನೆಯ ಮುಂದೆ ಅಪರಿಚಿತ ದುಷ್ಕರ್ಮಿ ಪೆಟ್ರೋಲ್​ ಬಾಂಬ್​ ದಾಳಿ ನಡೆಸಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

ಮನೆಯ ಮುಂದೆ ನಿಂತಿದ್ದ ದಿನಕರನ್​ ಅವರ ಕಾರಿನ ಮೇಲೆ ಪೆಟ್ರೋಲ್​ ಬಾಂಬ್​ ಎಸೆಯಲಾಗಿದ್ದು, ಕಾರು ಚಾಲಕ ಹಾಗೂ ಛಾಯಾಗ್ರಾಹಕ ಸೇರಿದಂತೆ ನಾಲ್ವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ದಾಳಿಯಿಂದ ಕಾರಿನ ಗ್ಲಾಸ್​ ಚೂರು ಚೂರಾಗಿದೆ.

ಮೂಲಗಳು ಪ್ರಕಾರ, ಹೊಸದಾಗಿ ಬಿಡುಗಡೆಯಾದ ಅಮ್ಮ ಮಕಲ್ ಮುನ್ನೇತ್ರ ಕಳಗಂ ಪಕ್ಷದ ಆಂತರಿಕ ದ್ವೇಷದ ಹಿನ್ನೆಲೆಯಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

TTV Dinakaran’s Car Attacked With Petrol Bomb, Driver Injured

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ