ಶ್ರೀನಗರ, ಜು.28-ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರಗಾಮಿಗಳ ಆಟ್ಟಹಾಸ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ತ್ರಾಲ್ ಪ್ರದೇಶದಲ್ಲಿ ಭಯೋತ್ಪಾದಕರು ಪೆÇಲೀಸ್ ಅಧಿಕಾರಿಯೊಬ್ಬರನ್ನು ಅಪಹರಿಸಿದ್ದಾರೆ. ಸ್ಪಷಲ್ ಪೆÇಲೀಸ್ ಅಫೀಸರ್(ಎಸ್ಪಿಒ) ಮುದಾಸಿರ್ ಅಹಮದ್ ಲೋನ್ ಅವರನ್ನು ಉಗ್ರರು ಅಪಹರಿಸಿದ್ದು, ಅವರ ಪತ್ತೆಗಾಗಿ ತೀವ್ರ ಶೋಧ ಮುಂದುವರಿದಿದೆ.
ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ತ್ರಾಲ್ ಪ್ರದೇಶದ ಚೈನತ್ತರ್ ಗ್ರಾಮದಲ್ಲಿರುವ ಮುದಾಸಿರ್ ಮನೆಗೆ ನುಗ್ಗಿದ ಉಗ್ರಗಾಮಿಗಳು ಬಂದೂಕಿನಿಂದ ಬೆದರಿಸಿ ಅಪಹರಿಸಿದ್ಧಾರೆ ಎಂದು ಪೆÇಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಸ್ಪಿಒ ರಕ್ಷಣೆಗಾಗಿ ಆ ಪ್ರದೇಶದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ಮುಂದುವರಿಸಿವೆ.
ಇತ್ತೀಚೆಗೆ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರು ಔರಂಗಜೇಬ್ ಮತ್ತು ಸಲೀಂ ಅಹಮದ್ ಎಂಬ ಯೋಧರನ್ನು ಇತ್ತೀಚೆಗೆ ಅಪಹರಿಸಿ ಚಿತ್ರ ಹಿಂಸೆ ನೀಡಿ ಕೊಂದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.