
ಕೆಜಿಎಫ್, ಜು.28- ಮೊಬೈಲ್ ಮೂಲಕ ಪರಿಚಯವಾಗಿ ಕೆನಡಾದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ನಗರದ ಆಂಡರಸನ್ಪೇಟೆಯ ಯುವಕನಿಗೆ ಮೋಸ ಮಾಡಿ, 1,87,300 ರೂ.ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಆಂಡರಸನ್ಪೇಟೆಯ ಎ ಬ್ಲಾಕ್ ನಿವಾಸಿ ಅಮರ ಸೂರ್ಯ ಮೋಸ ಹೋದವರು.
ಅವರಿಗೆ ಪರಿಚಯವಾದ ರಿಚರ್ಡ್ ಎಡ್ವರ್ಡ್ ಎಂಬುವರು ಕೆನಡಾದಲ್ಲಿ ಕೆಲಸ ಕೊಡಿಸುತ್ತೇನೆ. ಅದಕ್ಕೆ ಪ್ರತಿಯಾಗಿ ಹಣ ನೀಡಬೇಕು ಎಂದು ಷರತ್ತನ್ನು ಒಡ್ಡಿದ್ದ. ಅದನ್ನು ನಂಬಿದ ಅಮರ ಸೂರ್ಯ ಅವರ ಖಾತೆಗೆ ಹಣ ಜಮಾ ಮಾಡಿ, ಮೋಸ ಹೋಗಿದ್ದಾರೆ. ಈ ಸಂಬಂಧ ಸಿಇಎನ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.