ಲೈವ್ ಬ್ಯಾಂಡ್, ಡಿಸ್ಕೋಥೆಕ್ ಗೆ ಲೈಸೆನ್ಸ್ ಕಡ್ಡಾಯ

ಬೆಂಗಳೂರು, ಜು.28-ಬೆಂಗಳೂರು ನಗರ ಪೆÇಲೀಸ್ ಕಮೀಷನರೇಟ್ ವ್ಯಾಪ್ತಿ ಪ್ರದೇಶದಲ್ಲಿ ನಡೆಸುವ ಲೈವ್ ಬ್ಯಾಂಡ್(ಮ್ಯೂಸಿಕ್), ಡಿಸ್ಕೋಥೆಕ್, ಕ್ಯಾಬರೇಟ್ ಪ್ರದರ್ಶನ ನಡೆಸಲು ಲೈಸೆನ್ಸ್ ಕಡ್ಡಾಯ ಎಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.

ನ್ಯಾಯಾಲಯದ ಆದೇಶದನ್ವಯ ನಗರ ಪೆÇಲೀಸ್ ಕಮೀಷನರೇಟ್ ವ್ಯಾಪ್ತಿ ಪ್ರದೇಶದಲ್ಲಿ ಡಿಸ್ಕೋಥೆಕ್ ನಡೆಸಲು ಪೆÇಲೀಸ್ ಆಯುಕ್ತರಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ.

ಈಗಾಗಲೇ ಪರವಾನಗಿ ಪಡೆಯದೆ ಲೈವ್ ಬ್ಯಾಂಡ್ ಡಿಸ್ಕೋಥೆಕ್ ಪ್ರದರ್ಶಿಸುತ್ತಿರುವ ಕೇಂದ್ರ ಅಥವಾ ರೆಸ್ಟೋರೆಂಟ್‍ಗಳ ಮಾಲೀಕರಿಗೆ ನಿಗದಿತ ಸಮಯದೊಳಗೆ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸುವಂತೆ ಸೂಚಿಸಿ ನೋಟೀಸ್ ನೀಡಲಾಗಿದೆ.

ನಿಗದಿತ ಸಮಯದೊಳಗೆ ಪರವಾನಗಿ ಕೋರಿ ಅರ್ಜಿ ಸಲ್ಲಿಸದೆ ಇರುವ ರೆಸ್ಟೋರೆಂಟ್ ಮಾಲೀಕರಿಗೆ ಸಂಗೀತ ಪ್ರದರ್ಶನವನ್ನು ಸ್ಥಗಿತಗೊಳಿಸುವಂತೆ ಸೂಚಿಸಿ ಕ್ಲೋಸರ್ ನೋಟಿಸ್ ನೀಡಲಾಗಿದೆ.

Supreme Court ordered,Bangalore City Police Commissionerate,Live band, discoheck, cabaret,,License mandatory

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ