
ಲಂಡನ್: ಲಂಡನ್ ನಲ್ಲಿ ನಡೆದ ಮಹಿಳಾ ಹಾಕಿ ವಿಶ್ವಕಪ್ ಪಂದ್ಯದಲ್ಲಿ ಭಾರತ-ಐರ್ಲೆಂಡ್ ವಿರುದ್ಧ ಸೋತಿದೆ.
ಲೀ ವ್ಯಾಲಿ ಹಾಕಿ ಕೇಂದ್ರದಲ್ಲಿ ನಡೆದ ಪಂದ್ಯದಲ್ಲಿ ಭಾರತ ಐರ್ಲೆಂಡ್ ವಿರುದ್ಧ 0-1 ಅಂತರದಿಂದ ಸೋತಿದ್ದು, ಐರ್ಲೆಂಡ್ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದೆ. ಅನ್ನಾ ಒಫ್ಲಾನ್ನಾನ್ ಐರ್ಲೆಂಡ್ ಪರ ಅತಿ ಹೆಚ್ಚು ಗೋಲ್ ದಾಖಲಿಸಿದ ಆಟಗಾರ್ತಿಯಾಗಿದ್ದಾರೆ.
57ನೇ ನಿಮಿಷದಲ್ಲಿ ಭಾರತ ಹಾಕಿ ತಂಡದ ನಾಯಕಿ ರಾಣಿ ರಾಮ್ಪಾಲ್ ಅವರಿಗೆ ಗೋಲ್ ದಾಖಲಿಸುವ ಅವಕಾಶ ಇತ್ತಾದರೂ ಗೋಲ್ ಕೀಪರ್ ಯಶಸ್ವಿ ಕಾರ್ಯನಿರ್ವಹಣೆಯಿಂದಾಗಿ ಭಾರತಕ್ಕೆ ಸಿಗಲು ಸಾಧ್ಯವಿದ್ದ ಒಂದು ಗೋಲ್ ಸಹ ತಪ್ಪಿತು. ಜುಲೈ.29 ರಂದು ನಡೆಯುವ ಪಂದ್ಯದಲ್ಲಿ ಭಾರತ ಅಮೆರಿಕವನ್ನು ಎದುರಿಸಲಿದ್ದು, ಕ್ವಾರ್ಟರ್ ಫೈನಲ್ಸ್ ಗೆ ಪ್ರವೇಶಿಸುವ ಅವಕಾಶವನ್ನು ಇನ್ನೂ ಹೊಂದಿದೆ.