ಹುಬ್ಬಳ್ಳಿ: ವೈಷ್ಣವ ಪರಂಪರೆಯ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಗುರುಪೀಠದ 23ನೇ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ದ್ಯೂತಕವಾಗಿ ಚಾತುರ್ಯಮಾಸ ವೃತ-2018ನ್ನು ಅಗಷ್ಟ 2ರಿಂದ ಸೆಪ್ಟೆಂಬರ್ 25 ವರೆಗೆ ಅಮರಗೋಳದ ವಿದ್ಯಾಧಿರಾಜ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪುತ್ತು ಪೈ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧುನಿಕವಾಗಿ ನವೀಕರಿಸಲಾಗಿರುವ ವಿದ್ಯಾಧಿರಾಜ ಭವನವೂ 6000 ಚದರ ಅಡಿ ವಿಸ್ತೀರ್ಣದ ಸುಂದರವಾದ ಸಭಾ ವೇದಿಕೆಯಲ್ಲಿ ಚಾತುರ್ಮಾಸ ಸಮಾರಂಭ ಆಯೋಜಿಸಲಾಗಿದೆ. ವಿಲಂಭಿ ಸಂವತ್ಸರದ ವೃತಾಚರಣೆ ಪಟ್ಟ ಶಿಷ್ಯ ಸ್ವಾಮೀಜಿಯಾದ ಶ್ರೀಮದ್ ವಿದ್ಯಾಧೀಶ ತೀರ್ಥ ನೇತೃತ್ವದಲ್ಲಿ ಪ್ರತಿನಿತ್ಯ ಜಪಾನುಷ್ಠಾನ, ಪಾರಾಯಣ ಯತಿವರೇಣ್ಯರಿಂದ ರಾಮದೇವ ವೀರವಿಠ್ಠಲ ದೇವರ ತ್ರಿಕಾಲ ಪೂಜೆ, ಮದ್ಯಾಹ್ನ ಅನ್ನ ಸಂತರ್ಪಣೆ ಭಜನೆ, ಸಂಜೆ ಘನವೆತ್ತ ವಿದ್ವಾಂಸ ಪಂಡಿತರಿಂದ ಜ್ಞಾನ ಸತ್ರ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮಹಾಮಹೋತ್ಸವದಂತೇ ಆಚರಿಸಲು ಸಮಸ್ತ ಸಮಾಜ ಭಾಂದವರು ನಿರ್ಧರಿಸಿದ್ದಾರೆ. ಅಲ್ಲದೇ ದೇಶದ ವಿವಿಧ ಮೂಲೆಗಳಿಂದ 25,000 ಜನರು ಆಗಮಿಸುವ ನಿರೀಕ್ಷೆಯಿದೆ. ಅಲ್ಲದೇ ಆಗಷ್ಟ್ 26ರಂದು ಗುರುಗಳ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಇದು ನಗರದಲ್ಲಿ ಆಯೋಜನೆಗೊಂಡಿರುವ ಎರಡನೇ ಚಾತುರ್ಮಾಸ ಕಾರ್ಯಕ್ರಮವಾಗಿದೆ. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಹಾಗೂ ಮನರಂಜನೆ ಮತ್ತು ಆರೋಗ್ಯ ತಪಾಸಣೆಯನ್ನು ಕೂಡಾ ಏರ್ಪಡಿಸಲಾಗಿದೆ. ಭರತನಾಟ್ಯ, ಶ್ರೀನಿವಾಸ ಕಲ್ಯಾಣ, ಯಕ್ಷಗಾನ ಲವಕುಶ, ದಶಾವತಾರ ನೃತ್ಯ ರೂಪಕಗಳು ಏರ್ಪಡಿಸಲಾಗಿದೆ. ಚಾತುರ್ಮಾಸ ಅವಧಿಯಲ್ಲಿ ಸಂಜೆ ಪ್ರವಚನಕ್ಕಾಗಿ ಪಂ.ಪ್ರದ್ಯುಮ್ನಾಚಾರ್ಯ, ಡಾ.ಪವನಭಟ್ಟ, ವೆಂಕಟನರಸಿಂಹಾಚಾರ್ಯ, ಸುಘೋಷ ಆಚಾರ್ಯ, ವಿದ್ಯಾನರಸಿಂಹಾಚಾರ್ಯ, ಬ್ರಹ್ಮಣ್ಯ ಆಚಾರ್ಯ, ಸು.ರಾಮಣ್ಣ, ಚಕ್ರವರ್ತಿ ಸೊಲಿಬೆಲೆ ಆಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಆರ್.ಎನ್.ನಾಯಕ, ಡಿ.ಆರ್.ನಾಯಕ, ಮಹೇಶ ಬಾಂಡಗೆ, ಶಾನಭಾಗ ಸೇರಿದಂತೆ ಇತರರು ಇದ್ದರು.