ಧಾರವಾಡ – ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ

*ಧಾರವಾಡ –

ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ಸಹದೇವಪ್ಪ ಗಣಿ ವಯಾ(45) ಎಂಬ ರೈತ ಸಾಲಭಾದೆ ತಾಳಲಾರದೆ ವಿಷ ಸೇವಿಸಿದ್ದರು.ವಿಷಯ ತಿಳಿದು ಸ್ಥಳೀಯರು ಸೇರಿ ದೌಡಾಯಿಸಿ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ದಾಖಲಿಸಿದ್ದರು ಆದರೆ ಚಿಕಿತ್ಸೆ ಪಲಿಸದೆ ರೈತ ಮಲ್ಲಪ್ಪ ಹಸುನಿಗಿದ ಘಟನೆ ರಾತ್ರಿ ಮೂರು ಘಂಟಗೆ ಸಂಭವಿಸಿದೆ.
ಮೃತ ರೈತ ನಿಗೆ ಎರಡು ಎಕರೆ ಮೂವತ್ತು ಗುಂಟೆ ಜಮೀನು ಹೊಂದಿದ್ದು, ಸಿಂಡಿಕೇಟ್ ಬ್ಯಾಂಕ್ ನಲ್ಲಿ 1,80,000 ಲಕ್ಷ,ರೂ ಸಾಲ,ಲೇವಾದೇವಿ ದಾರರ ಬಳಿ ಸುಮಾರು 2,00,000 ಲಕ್ಷದವರಿಗೆ ಸಾಲ ಒಟ್ಟು 3,80,000 ಲಕ್ಷ ರೂ ಸಾಲದ ಭಾದೆತಾಳಲಾರದೆ. ಮಲ್ಲಪ್ಪ ವಿಷ ಸೆವಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ