ಜೈಪುರ:ಜು-೨೭: ‘ನಾನು ಬಯಸಿದರೆ ಯಾವ ಘಳಿಗೆಯಲ್ಲಾದರೂ ಮುಖ್ಯಮಂತ್ರಿಯಾಗಬಲ್ಲೆ. ಈ ಹುದ್ದೆ ಪಡೆಯುವುದು ನನಗೆ ಚಿಟಿಕೆ ಹೊಡೆದಷ್ಟೇ ಸುಲಭ. ಆದರೆ ವೈಯಕ್ತಿಕ ಸ್ವಾತಂತ್ರ್ಯ ಬಲಿಕೊಟ್ಟು ಆ ಪದವಿ ಪಡೆಯುವುದು ನನಗೆ ಇಷ್ಟವಿಲ್ಲ ಎಂದು ನಟಿ, ಸಂಸದೆ ಹೇಮಾ ಮಾಲಿನಿ ಹೇಳಿದ್ದಾರೆ.
ರಾಜಸ್ಥಾನದ ಬನ್ಸ್ವಾರಾದಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾನು ಸಿಎಂ ಹುದ್ದೆಗೇರಲು ಒಂದೇ ಒಂದು ನಿಮಿಷ ಸಾಕು… ಆದರೆ ನನಗದು ಬೇಕಿಲ್ಲ. ಅದರಿಂದ ಮುಕ್ತವಾಗಿ ಓಡಾಡುವ ಸ್ವಾತಂತ್ರ್ಯ ಇಲ್ಲವಾಗುತ್ತದೆ ಎಂದರು.
ಉತ್ತರ ಪ್ರದೇಶದ ಸಿಎಂ ಸ್ಥಾನವನ್ನೇ ಗಮನದಲ್ಲಿಟ್ಟುಕೊಂಡು ಅವರು ಈ ಮಾತು ಹೇಳಿರುವುದು ಸ್ಪಷ್ಟ. ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನೇ ಬದಿಗೆ ಸರಿಸುವಷ್ಟು ತಾವು ಪ್ರಭಾವಿಗಳೇ ಎನ್ನುವ ಪ್ರಶ್ನೆಗೆ ಅವರು ಉತ್ತರ ನೀಡದೇ ಜಾರಿಕೊಂಡಿದ್ದಾರೆ. ಆದರೆ, ನಟಿಯಾಗಿ ತಾವು ಗಳಿಸಿದ ಖ್ಯಾತಿಯೇ ಸಂಸದೆಯಾಗಿ ಆಯ್ಕೆಯಾಗಲು ಕಾರಣ ಎಂದು ಒಪ್ಪಿಕೊಂಡರು.
Can Become Chief Minister “In A Minute”: BJP Lawmaker Hema Malini