ಜೋಹಾನ್ಸ್ ಬರ್ಗ್:ಜು-27: ಬ್ರಿಕ್ಸ್ ಶೃಂಗಸಭೆ ಮೂಲಕ ಮತ್ತೆ ರಷ್ಯಾ ಅದ್ಯಕ್ಷ ವ್ಲಾಡಿಮಿರ್ ಪುಟಿನ್ ರನ್ನು ಭೇಟಿಯಾಗುತ್ತಿರುವುದು ಸಂತಸ ತಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿ ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸೇರಿದಂತೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಾಯಕರನ್ನು ಭೇಟಿ ಮಾಡಿದರು.
ಈ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರನ್ನು ಭೇಟಿಯಾದ ಪ್ರಧಾನಿ ಮೋದಿ ಅವರಿಗೆ ಹಸ್ತಲಾಘವ ಮಾಡಿ ಬ್ರಿಕ್ಸ್ ಶೃಂಗಸಭೆಯ ಮೂಲಕ ನಿಮ್ಮನ್ನು ಭೇಟಿಯಾಗುತ್ತಿರುವುದು ಖುಷಿ ತಂದಿದೆ ಎಂದು ಹೇಳಿದರು. ಅಂತೆಯೇ ರಷ್ಯಾಗೆ ಭೇಟಿ ನೀಡಿದ್ದ ವೇಳೆ ತಮ್ಮ ಸೋಚಿ ಭೇಟಿಯನ್ನು ಇದೇ ವೇಳೆ ನೆನಪಿಸಿಕೊಂಡರು. ಸೋಚಿಯಲ್ಲಿ ಪುಟಿನ್ ರೊಂದಿಗೆ ಕಳೆದ ಕ್ಷಣಗಳು ನನಗೆ ಈಗಲೂ ನೆನಪಿದೆ. ಬಹುಶಃ ಇದು ಭಾರತ ಮತ್ತು ರಷ್ಯಾ ದೇಶಗಳ ಸೌಹಾರ್ಧತೆ ಮತ್ತು ಬಾಂಧವ್ಯವನ್ನು ಸಾರುತ್ತಿದೆ. ಉಭಯ ದೇಶಗಳೂ ಪರಸ್ಪರ ಎಲ್ಲ ವಿಚಾರಗಳಲ್ಲೂ ಒಟ್ಟಾಗಿ ಸಾಗುತ್ತಿದ್ದೇವೆ. ನಮ್ಮ ಬಾಂಧವ್ಯ ಆಳವಾಗಿದ್ದು, ಈ ಹಿಂದಿಗಿಂತಲೂ ಭವಿಷ್ಯದಲ್ಲಿ ನಮ್ಮ ಸೌಹಾರ್ಧ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.
BRICS Summit 2018,PM Modi Meets Vladimir Putin,South Africa