ಬೆಂಗಳೂರು: ಇಂದು ಖಗ್ರಾಸ ಚಂದ್ರಗ್ರಹಣ ಹಿನ್ನೆಲೆ ಜನರಲ್ಲಿ ಮೂಡ ನಂಬಿಕೆ ಹೋಗಲಾಡಿಸುವ ಸಲುವಾಗಿ ವಿಜ್ಞಾನದೆಡೆಗೆ ನಮ್ಮ ನಡಿಗೆ ಎಂದು ಕೆಲ ಪ್ರಗತಿಪರರು ಹಾಗೂ ಮೌಡ್ಯ ವಿರೋದಿಗಳಿಂದ ಟೌನ್ ಹಾಲ್ ಎದುರು ಕೇಕ್ ಕತ್ತರಿಸಿ ವಿನೂತನ ರೀತಿಯಲ್ಲಿ ಚಂದ್ರಗ್ರಹಣ ಆಚರಣೆಗೆ ಸಿದ್ದತೆ ಮಾಡಲಾಗುತ್ತಿದೆ
ಗ್ರಹಣದ ಬಗ್ಗೆ ಮೌಡ್ಯತೆ ಹೋಗಲಾಡಿಸಲು ಕೆಲ ವಿಜ್ಞಾನಿಗಳು ಪ್ರಗತಿಪರರು ಸೇರಿ ಟೌನ್ ಹಾಲ್ ನ ಮುಂದೆ ಕುಳಿತು ಗ್ರಹಣದ ಸಮಯದಲ್ಲಿ ಆಹಾರ ಸೇವನೆ ಮಾಡಬಾರದೆಂಬ ಪ್ರತೀತಿ ಹಿನ್ನೆಲೆ ಮಾಂಸಹಾರ, ಹಣ್ಣುಗಳನ್ನು ಸೇವಿಸುವ ಮೂಲಕ ಜನರಲ್ಲಿ ಮೂಡ ನಂಬಿಕೆ ಬಗ್ಗೆ ಜಾಗೃತಿ ಮೂಡಿಸುತ್ತಿದಾರೆ ಜ್ಯೋತಿಷ್ಯ ತೊಲಗಲಿ ವಿಜ್ಞಾನ ಉಳಿಯಲಿ ಎಂದು ಘೋಷಣೆಗಳನ್ನು ಕೂಗುತ್ತ ನಮ್ಮ ದೇಶವನ್ನು ಸುಡುತ್ತಿರುವ ಜ್ಯೋತಿಷ್ಯಿಗಳು, ಜ್ಯೋತಿಷ್ಯ ಎನ್ನುವುದು ನಮ್ಮ ದೇಶಕ್ಕೆ ಅಂಟಿದ ಶಾಪವಾಗಿದೆ ಆದ್ದರಿಂದ ವಿಜ್ಞಾನ ನಂಬುತ್ತೇವೆ ಜ್ಯೊತಿಷ್ಯ ನಂಬುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.