ಶಿಕ್ಷಣ ಖಾತೆ ಸಚಿವರ ಪಾಠ

ಹಾಸನ, ಜು.26- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎನ್. ಮಹೇಶ್ ನಿನ್ನೆ ಚನ್ನಪಟ್ಟಣ ದಲ್ಲಿರುವ ಹಿರಿಯ ಪ್ರಾಥಮಿಕ-ಪ್ರೌಢ ಶಾಲೆಗೆ ದಿಢೀರ್ ಭೇಟಿ ನೀಡಿ, ಮಕ್ಕಳೊಂದಿಗೆ ಕುಳಿತು ಅಚ್ಚರಿ ಮೂಡಿಸಿದರು.
ಮಕ್ಕಳ ಬೆಂಚ್‍ನಲ್ಲಿ ಕುಳಿತುಕೊಂಡ ಸಚಿವರು, ಪಠ್ಯ ಪುಸ್ತಕ ಹಾಗೂ ಪಾಠ ಪ್ರವಚನದ ಬಗ್ಗೆ ವಿದ್ಯಾರ್ಥಿಗಳಿಂದಲೇ ಮಾಹಿತಿ ಪಡೆದಿದ್ದಾರೆ.
ಶಾಲಾ-ಕಾಲೇಜು ಕೊಠಡಿ, ಅಡುಗೆ ಕೋಣೆಗಳಿಗೂ ಭೇಟಿ ನೀಡಿದ ಸಚಿವರು, ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳು ಪುಸ್ತಕ ನೋಡಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಶಿಕ್ಷಕರಿಗೆ ಸೂಚನೆ ನೀಡಿದ ಸಚಿವರು, ಒಂದು ಗಂಟೆಗೂ ಹೆಚ್ಚು ಕಾಲ ಶಾಲೆಯಲ್ಲಿದ್ದರು. ಇದೇ ವೇಳೆ ಶಿಕ್ಷಕರಂತೆ ಮಕ್ಕಳಿಗೆ ಪಾಠ ಮಾಡಿದ ಸಚಿವರು ಕೆಲವೊಂದು ಪ್ರಶ್ನೆಗಳನ್ನು ಕೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ