ನಕಲಿ ಚಿನ್ನ ವಂಚನೆ, ಬಂಧನ

ಚಿತ್ರದುರ್ಗ, ಜು.26-ನಕಲಿ ಚಿನ್ನ ನೀಡಿ ವಂಚಿಸುತ್ತಿದ್ದ ಐವರು ವಂಚಕರ ತಂಡವನ್ನು ಬಂಧಿಸಿರುವ ಮೊಳಕಾಲ್ಮೂರು ಠಾಣೆ ಪೆÇಲೀಸರು, ಆರೋಪಿಗಳಿಂದ 12.5 ಲಕ್ಷ ರೂ. ನಗದು ಮತ್ತು 2 ಕೆ.ಜಿ.ನಕಲಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ತಾಲೂಕಿನಲ್ಲಿ ಇತ್ತೀಚೆಗೆ ನಕಲಿ ಚಿನ್ನ ನೀಡಿ ವಂಚಿಸುತ್ತಿದ್ದ ಪ್ರಕರಣಗಳು ಹೆಚ್ಚಾಗಿ ನಡೆದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಮೊಳಕಾಲ್ಮೂರು ಸಿಪಿಐ ಯಶವಂತ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆಂಧ್ರಪ್ರದೇಶ ಮತ್ತು ಬಳ್ಳಾರಿ ಮೂಲದ ಸೋಮಣ್ಣ, ರವಿ ನಾಯ್ಕ್, ಮಾರಣ್ಣ, ರಾಮಣ್ಣ ಮತ್ತು ಮಂಜಣ್ಣ ಎಂಬ ಆರೋಪಿಗಳನ್ನು ಬಂಧಿಸಿದೆ.
ಆರೋಪಿಗಳಿಂದ 12.5 ಲಕ್ಷ ರೂ. ನಗದು ಮತ್ತು 2 ಕೆ.ಜಿ.ನಕಲಿ ಚಿನ್ನವನ್ನು ವಶಪಡಿಸಿಕೊಂಡು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಪಿಐ ಯಶವಂತ್ ತಿಳಿಸಿದ್ದಾರೆ.
ಈ ತಂಡ ಇತ್ತೀಚೆಗೆ ಆಂಧ್ರ ಪ್ರದೇಶದ ಮೆಕ್ಯಾನಿಕ್ ಚಿಟ್ಟಿ ಬಾಬು ಎಂಬವರಿಗೆ ಸಾವಿರಾರು ರೂ. ವಂಚಿಸಿತ್ತು. ಈ ಬಗ್ಗೆ ಮೊಳಕಾಲ್ಮೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ